ಶಿರಸಿ: ಬೆಂಗಳೂರಿನಲ್ಲಿರುವ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ನೀಡುವ ಪ್ರತಿಷ್ಠಿತ ವಿದ್ಯಾ ವಾಚಸ್ಪತಿ ಪದವಿ (ಡಿ ಲಿಟ್) ನಾಡಿನ ಹೆಸರಾಂತ ವಿದ್ವಾಂಸ ಉಮಾಕಾಂತ ಭಟ್ ಕೆರೇಕೈ ಅವರಿಗ ಪ್ರಕಟವಾಗಿದೆ.
ಬಹುಭಾಷಾ ಪಂಡಿತ, ಪ್ರಸಿದ್ಧ ತಾಳಮದ್ದಲೆ ಅರ್ಥದಾರಿ ಕೆರೇಕೈ ಅವರು ಮೇಲುಕೋಟೆ ಸಂಸ್ಕೃತ ಮಹಾವಿದ್ಯಾಲಯದ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಅನೇಕ ಪತ್ರಿಕೆ ಅಂಕಣಕಾರರಾಗಿ, ಕೃತಿಕಾರರಾಗಿ ಕೂಡ ಪರಿಚಿತರು. ಉಮಾಕಾಂತರು ಸಂಸ್ಕೃತ ಕ್ಷೇತ್ರದಲ್ಲಿ ಸಲ್ಲಿಸಿದ ಅಸಾಮಾನ್ಯ ಸೇವೆಗೆ ಈ ಪದವಿ ಲಭಿಸಿದೆ.
ಜುಲೈ 9ರಂದು ಬೆಂಗಳೂರಿನ ರಾಜ ಭವನದಲ್ಲಿ ಉಪರಾಷ್ಟ್ರಪತಿಗಳು ಪದವಿ ಪ್ರದಾನ ಮಾಡಲಿದ್ದಾರೆ ಎಂದು ವಿವಿ ಕುಲಸಚಿವ ಡಾ. ಗಿರೀಶ ಚಂದ್ರ ತಿಳಿಸಿದ್ದಾರೆ.
ಕೆರೇಕೈರಿಗೆ ‘ವಿದ್ಯಾವಾಚಸ್ಪತಿ’ ಪದವಿ ಪ್ರಕಟ
