ಶಿರಸಿ:ಅಕ್ಷರ ದೀಪ ಪೌಂಡೇಶನ್ ( ರಿ) ಅಕ್ಷರ ದೀಪ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲಾ ವೇದಿಕೆ ಧಾರಾವಾಡ-ಉತ್ತರ ಕನ್ನಡ ಹಾಗೂ ನಯನ ಫೌಂಡೇಶನ್ ಶಿರಸಿ ಇವರ ಸಹಯೋಗದಲ್ಲಿ ರಾಷ್ಟ್ರೀಯ ಕವಿ ಕಾವ್ಯ ಸಂಗಮ ಕಾರ್ಯಕ್ರಮ ಜು.3ರಂದು ಬೆಳಿಗ್ಗೆ 9.30ಕ್ಕೆ ನಗರದ ನಯನ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಕಾರ್ಯಕ್ರಮವನ್ನು ನಯನ ಫೌಂಡೇಶನ್ ಟ್ರಸ್ಟಿ ಡಾ. ತನುಶ್ರಿ ಹೆಗಡೆ ಉದ್ಘಾಟಿಸಲಿದ್ದು ಗಂಗಾವತಿ ಟಿಎಂಎಇ ಮಹಾವಿದ್ಯಾಲಯ ಸಹ ಪ್ರಾಧ್ಯಾಪಕ ಡಾ. ರಮೇಶ ಸಿದ್ದಪ್ಪ ಕೆ ಅಧ್ಯಕ್ಷತೆ ವಹಿಸಲಿದ್ದಾರೆ.
ರೋಣದ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಡಾ. ಪಂಚಯ್ಯ ರಾ ಹಿರೇಮಠ ಗೌರವ ಉಪಸ್ಥಿತರಿರುತ್ತಾರೆ. ಮುಖ್ಯ ಅತಿಥಿಗಳಾಗಿ ಸಾಹಿತಿ ಹಾಗೂ ಸಮಾಜ ಸೇವಕಿ ಶುಭಾ ವಿಷ್ಣು ಸಭಾಹಿತ, ಜ್ಯೋತಿ ಹೆಬ್ಬಾರ್, ಚಂದ್ರಶೇಖರ ಗಾವರವಾಡ ಆಗಮಿಸಲಿದ್ದಾರೆ.
ವಿಶೇಷ ಆಮಂತ್ರಿಕರಾಗಿ ನಯನ ಫೌಂಡೇಶನ್ ಸಂಸ್ಥಾಪಕ ಡಾ ಶಿವರಾಂ ಕೆ ವಿ, ಚಿಂತಕರ ಚಾವಡಿ ಅಧ್ಯಕ್ಷ ಎಸ್ ಎಸ್ ಭಟ್, ಸಂಚಲನದ ಕೃಷ್ಣ ಪದಕಿ ಹಾಗೂ ಸಾಹಿತ್ಯ ಸಿಂಚನ ಬಳಗದ ಸಂಸ್ಥಾಪಕ ಶಿವಪ್ರಸಾದ ಹಿರೇಕೈ ಆಗಮಿಸಲಿದ್ದಾರೆ.
ಈ ಸಂದರ್ಭದಲ್ಲಿ ಸಾಧಕ ರತ್ನ ಪ್ರಶಸ್ತಿ ಹಾಗೂ ಕರುನಾಡ ಕೇಸರಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ನಡೆಯಲಿದೆ . ನಂತರ ಆಯ್ದ ಕವಿಗಳಿಂದ ಕವಿಗೊಷ್ಠಿ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಜು.3ಕ್ಕೆ ‘ರಾಷ್ಟ್ರೀಯ ಕವಿ ಕಾವ್ಯ ಸಂಗಮ’
