ಶಿರಸಿ: ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ಬೆಂಗಳೂರು, ಶಿರಸಿ ಜಿಲ್ಲೆ ಹಾಗೂ ನೆಮ್ಮದಿ ಕುಟೀರದ ಮಾಸದ ಮಾತು ಸಂಯುಕ್ತಾಶ್ರಯದಲ್ಲಿ ಜು.1 ಶುಕ್ರವಾರ, ಇಳಿಹೊತ್ತು 3:30 ಘಂಟೆಗೆ ಶಿರಸಿಯ ನೆಮ್ಮದಿ ಕುಟೀರದಲ್ಲಿ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲಾಗಿದೆ. ಇಡಗುಂದಿ ವಿಶ್ವದರ್ಶನ ಶಾಲೆ ಶಿಕ್ಷಕ ಡಾ.ನವೀನಕುಮಾರ ಎ ಜಿ ಅವರು ಶಿವಕೋಟ್ಯಾಚಾರ್ಯ ವಿರಚಿತ ‘ವಡ್ಡಾರಾಧನೆ” ಕುರಿತು ಉಪನ್ಯಾಸ ನೀಡುವರು. ಆಸಕ್ತ ಸಹೃದಯರು, ಅಭಿಮಾನಿಗಳು ಭಾಗವಹಿಸಿ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳಬೇಕೆಂದು ಅಭಾಸಪ ಶಿರಸಿ ಜಿಲ್ಲಾ ಸಮಿತಿ ವಿನಂತಿಸಿದೆ.
ಜು.1 ಕ್ಕೆ ಉಪನ್ಯಾಸ ಕಾರ್ಯಕ್ರಮ
