ಶಿರಸಿ:ತಾಲೂಕಿನ ವಾನಳ್ಳಿಯ ಶ್ರೀ ಗಜಾನನ ಮಾಧ್ಯಮಿಕ ಶಾಲೆಯಲ್ಲಿ ಶಾಲಾ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಲಾಯಿತು. ಉದ್ಘಾಟಕರಾಗಿ ಆಗಮಿಸಿದ ಎಂ.ಎಂ.ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ರಾಘವೇಂದ್ರ ಹೆಗಡೆ ಜಾಜಿಗುಡ್ಡೆ ಮಾತನಾಡಿ ಮಕ್ಕಳಲ್ಲಿ ಶಾಲಾ ಹಂತದಲ್ಲಿ ನಾಯಕತ್ವ ಗುಣ ಬರಲು ವಿದ್ಯಾರ್ಥಿ ಸಂಘ ಸಹಕಾರಿ ಎಂದರು. ಅತಿಥಿಗಳಾಗಿ ಎಸ್.ಡಿ.ಎಂಸಿ ವಾನಳ್ಳಿ ಅಧ್ಯಕ್ಷ, ಎಂ.ಎನ್.ಭಟ್ಟ ಅರೇಕಟ್ಟಾ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಘವ ಹೆಗಡೆ ವಹಿಸಿದ್ದರೆ, ಪ್ರಮಾಣ ವಚನವನ್ನು ಶೋಭಾ ಗೌಡ, ಸ್ವಾಗತವನ್ನು ಕೃಷ್ಣಮೂರ್ತಿ ಭಟ್ಟ, ರೇಖಾ ಹೆಗಡೆ ವಂದಿಸಿದರು, ಕಾರ್ಯಕ್ರಮದ ನಿರ್ವಹಣೆ ಜನಾರ್ಧನ ಮೊಗೇರ ಮಾಡಿದರು.
ವಾನಳ್ಳಿ ಪ್ರೌಢಶಾಲೆಯ ಶಾಲಾ ವಿದ್ಯಾರ್ಥಿ ಸಂಘ ಉದ್ಘಾಟನೆ
