ಶಿರಸಿ; ಶಾಲೆಗಳಲ್ಲಿ ಸ್ವಚ್ಛ ಶಾಲೆ ಪುರಸ್ಕಾರವು ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ ಸರಕಾರಿ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಪ್ರಥಮವಾಗಿ 99% ಅಂಕ ಹಾಗೂ 5 ಸ್ಟಾರ್ ಪಡೆದು ಹೆಗಡೆಕಟ್ಟಾ ಪ್ರಾಥಮಿಕ ಶಾಲೆ ಆಯ್ಕೆಯಾಗಿ ಪ್ರಶಸ್ತಿ ಪಡೆದಿದೆ.
ಜೂ.29 ರಂದು ಜಿಲ್ಲಾಧಿಕಾರಿಗಳ ಕಚೇರಿ ಕಾರವಾರದಲ್ಲಿCEO ಪ್ರಿಯಾಂಗಾ ಹಾಗೂ ರಾಜು ಮೊಗವೀರ ಇವರಿಂದ ಹೆಗಡೆಕಟ್ಟಾ ಶಾಲೆಯ ಮುಖ್ಯಾಧ್ಯಾಪಕರು ಸತೀಶ ಹೆಗಡೆ ಪ್ರಶಸ್ತಿ ಪತ್ರ ಸ್ವೀಕರಿಸಿದರು.
ಶಾಲೆಯು ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಕ್ಕೆ SDMC ಯವರು,ಶಿಕ್ಷಕ ವೃಂದ ಹಾಗೂ ಪಾಲಕರು,ಮಕ್ಕಳು ಹರ್ಷ ವ್ಯಕ್ತಪಡಿಸಿದ್ದಾರೆ.ಸರಕಾರದ ಆದೇಶದ ಪ್ರಕಾರ ಮಾರ್ಗಸೂಚಿಯಂತೆ ಸ್ವಚ್ಛ ವಿದ್ಯಾಲಯ ಸಮತಿಯವರಿಗೂ, ಶಿರಸಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೂ, ಶಿರಸಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕರಿಗೂ SDMC ಯವರು ಅಭಿನಂದನೆ ಸಲ್ಲಿಸಿದ್ದಾರೆ.
ಸ್ವಚ್ಛ ಶಾಲೆ ಪುರಸ್ಕಾರಕ್ಕೆ ಹೆಗಡೆಕಟ್ಟಾ ಶಾಲೆ
