ಶಿರಸಿ; ಶಿರಸಿ ಶೈಕ್ಷಣಿಕ ಜಿಲ್ಲೆಯ 2022-27ರವರೆಗಿನ ಅವಧಿಗೆ ಪದಾಧಿಕಾರಿಗಳ ಆಯ್ಕೆಯು ಜೂ.30, ಗುರುವಾರದಂದು ಭಾರತ ಸೇವಾದಳ ಜಿಲ್ಲಾ ಕಛೇರಿಯಲ್ಲಿ ನಡೆಯಿತು. ಜಿಲ್ಲಾಧ್ಯಕ್ಷರು,ಉಪಾಧ್ಯಕ್ಷ,ಕಾರ್ಯದರ್ಶಿ,ಕೋಶಾಧ್ಯಕ್ಷ ಹಾಗೂ ಕೇಂದ್ರ ಕಾರ್ಯಕಾರಿ ಸಮಿತಿಯ ಸದಸ್ಯ ಸ್ಥಾನದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ವಿ.ಎಸ್. ನಾಯಕ, ಉಪಾಧ್ಯಕ್ಷರಾಗಿ ಪ್ರದೀಪ ಸಂಜೀವ ಶೆಟ್ಟಿ,ಕಾರ್ಯದಶಿಯಾಗಿ ಪ್ರೋ. ಕೆ.ಎನ್. ಹೊಸಮನಿ, ಕೋಶಾಧ್ಯಕ್ಷರಾಗಿ ಮಾಹಾದೇವಪ್ಪ ಪಿ. ಕುಸೂರ ಹಾಗೂ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸುರೇಶ್ಚಂದ್ರ ಹೆಗಡೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದಂತೆ ಸದಸ್ಯರುಗಳಾಗಿ ಡಾ. ಎಸ್. ಆಯ್. ಭಟ್ಟ, ರಮಾಕಾಂತ ವಿ. ಹೆಗಡೆ, ನಾಗರಾಜ ಎಚ್. ವಡ್ಡರ್, ಸಿ.ಕೆ. ಅಶೋಕ, ಗಜಾನನ ಆರ್.ಹೆಗಡೆ, ಕೃಷ್ಣ ಅಶೋಕ ಗೌಡ, ನರಸಿಂಹ ವೆಂಕಟ್ರಮಣ ಕೋಣೆಮನೆ,ಶಂಕರ ಆರ್.ಭಟ್, ಶಿಕ್ಷಕರ ಪ್ರತಿನಿಧಿಯಾಗಿ ಸುದಾಮ ಆರ್.ಪೈ. ಶ್ರೀಮತಿ ಸಾವಿತ್ರಿ ಎನ್.ಭಟ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಗಳಾದ ಭಾರತ ಸೇವಾದಳದ ಜಿಲ್ಲಾ ಸಂಘಟಕ ರಾಮಚಂದ್ರ ಹೆಗಡೆ, ನೇತೃತ್ವದಲ್ಲಿ ಈ ಎಲ್ಲಾ ಪ್ರಕ್ರಿಯೆ ಯಶಸ್ವಿಯಾಗಿ ನೆರವೇರಿತು. ಈ ಸಂದರ್ಭದಲ್ಲಿ ಸೇವಾದಳದ ಶಿರಸಿ ತಾಲೂಕಾ ಅಧ್ಯಕ್ಷರಾದ ಅಶೋಕ ಬಜಂತ್ರಿ, ಕೋಶಾಧ್ಯಕ್ಷರಾದ ಕುಮಾರ ಎಸ್.ನಾಯ್ಕ, ಸದಸ್ಯರಾದ ಕೆ.ಎನ್.ನಾಯ್ಕ ಉಪಸ್ಥಿತರಿದ್ದರು.
ಭಾರತ ಸೇವಾದಳ ಶಿರಸಿ ಶೈಕ್ಷಣಿಕ ಜಿಲ್ಲಾ ನೂತನ ಸಮಿತಿ ಆಯ್ಕೆ
