• Slide
    Slide
    Slide
    previous arrow
    next arrow
  • ಓರಿಸ್ಸಾದಲ್ಲಿ ಕಟುಕನ ಕೈಗೆ ಸಿಲುಕಿ ಸಂಕಷ್ಟದಲ್ಲಿದ್ದ ಯುವತಿಯ ರಕ್ಷಿಸಿದ ಅಂಕೋಲಾ ಪೊಲೀಸರು

    300x250 AD

    ಅಂಕೋಲಾ: ಪ್ರೀತಿಯ ಬಲೆಗೆ ಬಿದ್ದು ಮೋಸ ಹೋಗಿ ಓರಿಸ್ಸಾ ಸೇರಿಕೊಂಡಿದ್ದ ಯುವತಿಯೋರ್ವಳು ತನ್ನ ಪ್ರೀಯತಮನ ಅಸಲಿ ರೂಪ ಕಂಡು ತನ್ನನ್ನು ರಕ್ಷಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ ಪೆನ್ನೇಕರ್ ಅವರಲ್ಲಿ ಮೊರೆ ಹೋದ ಹಿನ್ನೆಲೆಯಲ್ಲಿ ಇಲ್ಲಿನ ಪೊಲೀಸರು ಓರಿಸ್ಸಾದಿಂದ ಯುವತಿಯನ್ನು ರಕ್ಷಿಸಿ ಅಂಕೋಲಾಕ್ಕೆ ಕರೆತರುತ್ತಿರುವ ಕುತೂಹಲಕಾರಿ ವಿದ್ಯಮಾನ ನಡೆದಿದೆ.

    ಹಾರವಾಡ ಗಾಬಿತವಾಡದ ಯುವತಿಯೋರ್ವಳು ಸ್ವಗೃಹದಿಂದ ಫೆ.14ರ ಸಂಜೆ ಬೆಂಗಳೂರಿನಲ್ಲಿ ಖಾಸಗಿ ಕಂಪನಿಗೆ ಕೆಲಸಕ್ಕೆ ಹೋಗುತ್ತೇನೆ ಎಂದು ಹೇಳಿ ಹೊರಟಿದ್ದಳು. ಆದರೆ ಆಕೆ ಮನೆಗೆ ಹಿಂದಿರುಗದೆ, ಕೆಲಸಕ್ಕೂ ಹೋಗದೆ ಕಾಣೆಯಾಗಿದ್ದಾಳೆ ಎಂದು ಯುವತಿಯ ತಂದೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

    ಹಾರವಾಡದ ಯುವತಿ ಬೆಂಗಳೂರಿನಲ್ಲಿ ಕಂಪನಿಯೊAದರಲ್ಲಿ ಕೆಲಸಕ್ಕಿರುವಾಗ ಓರಿಸ್ಸಾದ ಯುವಕನೊಬ್ಬನೊಂದಿಗೆ ಸ್ನೇಹವಾಗಿದ್ದು, ಸ್ನೇಹ ಪ್ರೀತಿಗೆ ಜಾರಿದ ಹಿನ್ನೆಲೆಯಲ್ಲಿ ಯುವತಿ ಮನೆಯವರಿಗೂ ಹೇಳದೆ ಕೇಳದೆ ಓರಿಸ್ಸಾಕ್ಕೆ ಪ್ರಿಯತಮನೊಂದಿಗೆ ತೆರಳಿದ್ದಳು. ದಿನ ಕಳೆದಂತೆ ಯುವತಿಗೆ ಪ್ರಿಯತಮನ ಅಸಲಿ ಮುಖ ಪರಿಚಯವಾಗುತ್ತಾ ಹೋಗಿದ್ದು, ಅನುಭವಿಸುತ್ತಿರುವ ತೀವ್ರ ಕಿರುಕುಳ ನೋವನ್ನು ಯಾರೊಂದಿಗೂ ಹೇಳಿಕೊಳ್ಳಲಾಗದೆ ಅತಂತ್ರಳಾಗಿದ್ದಳು.

    ಆಗ ಯುವತಿ ನೇರವಾಗಿ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ ಪೆನ್ನೇಕರ್ ಅವರ ನಂಬರನ್ನು ಸಾಮಾಜಿಕ ಜಾಲದಲ್ಲಿ ಜಾಲಾಡಿ, ಅವರ ಸಂಪರ್ಕ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾಳೆ. ಕೂಡಲೇ ಸ್ಪಂದಿಸಿದ ಎಸ್‌ಪಿ, ಯುವತಿಯನ್ನು ರಕ್ಷಿಸಿ ತರುವಂತೆ ಅಂಕೋಲಾ ಪೊಲೀಸರಿಗೆ ಸೂಚನೆ ನೀಡಿದ್ದರು.

    300x250 AD

    ದೂರದ ಓರಿಸ್ಸಾದಿಂದ ಯುವತಿಯನ್ನು ರಕ್ಷಿಸಿ ತರುವುದು ಸಾಮಾನ್ಯದ ಸಂಗತಿಯಾಗಿರಲಿಲ್ಲ. ಯುವತಿ ಸಿಲುಕಿ ಹಾಕಿಕೊಂಡಿದ್ದ ಪ್ರದೇಶವು ಕುಖ್ಯಾತ ಜನರನ್ನು ಹೊಂದಿದ್ದ ಸ್ಥಳವಾಗಿತ್ತು. ಪಿಎಸೈ ಮಹಾಂತೇಶ ಹಾಗೂ ಅಪರಾಧ ದಳದ ಸಿಬ್ಬಂದಿ ಶ್ರೀಕಾಂತ ಕಟಬರ ಅವರು ಓರಿಸ್ಸಾಕ್ಕೆ ತೆರಳಿ ಗುಪ್ತವಾಗಿ ಯುವತಿ ಇದ್ದಲ್ಲಿಯ ಮಾಹಿತಿ ಸಂಗ್ರಹಿಸಿ, ಸಿನಿಮೀಯ ರೀತಿಯಲ್ಲಿ ರಕ್ಷಣೆ ಮಾಡಿ ಯುವತಿಯನ್ನು ಓರಿಸ್ಸಾದಿಂದ ಕರೆ ತರುತ್ತಿದ್ದಾರೆ. ಇಂದು ಬೆಳಿಗ್ಗೆ ಈ ತಂಡ ಪಟ್ಟಣಕ್ಕೆ ಬರುವ ಸಾಧ್ಯತೆ ಇದೆ.

    ಎದೆಗಾರಿಕೆ ಪ್ರದರ್ಶಿಸಿ ಓರಿಸ್ಸಾದಿಂದ ರಕ್ಷಣೆ ಮಾಡಿ ತಂದ ಪಿಎಸೈ ಮಹಾಂತೇಶ ಹಾಗೂ ಅಫರಾಧ ದಳದ ಸಿಬ್ಬಂದಿ ಶ್ರೀಂಕಾತ ಕಟಬರ ಅವರ ಕಾರ್ಯ ಸಾಧನೆಗೆ ಪ್ರಶಂಸೆ ವ್ಯಕ್ತವಾಗಿದೆ. ಸಿಪಿಐ ಸಂತೋಷ ಶೆಟ್ಟಿ ಹಾಗೂ ಪಿಎಸೈ ಪ್ರವೀಣಕುಮಾರ್ ಮಾರ್ಗದರ್ಶನ ಮಾಡಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top