• first
    second
    third
    previous arrow
    next arrow
  • MES-AITAHUB  ಕೌಶಲ್ಯ ತರಬೇತಿ ಕೇಂದ್ರದ ವಿದ್ಯಾರ್ಥಿಗಳ ಗಮನಾರ್ಹ ಸಾಧನೆ

    300x250 AD

    ಶಿರಸಿ;ನಗರದ ಎಮ್.ಇ.ಎಸ್. ವಾಣಿಜ್ಯ ಮಹಾವಿದ್ಯಾಲಯದ IQAC ಸಂಯೋಜನೆಯಲ್ಲಿ MES-AITAHUB  ಕೌಶಲ್ಯ ತರಬೇತಿ ಕೇಂದ್ರ ಕಳೆದ ವರ್ಷ ಡಿಸೆಂಬರನಲ್ಲಿ ಉದ್ಘಾಟನೆಗೊಂಡು CA-Foundation, PGCET-MBA, M.Com., Banking, JRP, JPP ಯ ತರಬೇತಿಯನ್ನು ನೀಡುತ್ತಿದೆ.
    ನಮ್ಮ ಕಾಲೇಜಿನ ಆರನೇ ಸೆಮಿಸ್ಟರನ ವಿದ್ಯಾರ್ಥಿಗಳಾದ ಕು. ಅಕ್ಷಯ ಹೆಗಡೆ ಹಾಗೂ ಕು. ವಿಜಯಕುಮಾರ ಹೆಗಡೆ ಇವರು ಮೊದಲ ಪ್ರಯತ್ನದಲ್ಲಿ MAT-Management Aptitude Test ನಲ್ಲಿ ಕ್ರಮವಾಗಿ 591.50 ಹಾಗೂ 574.50 ಅಂಕಗಳನ್ನು ಪಡೆದುಕೊಂಡಿದ್ದಾರೆ. ಕು. ಅಕ್ಷಯ ಹೆಗಡೆ ಈಗಾಗಲೇ ಬೆಂಗಳೂರಿನ ಜೈನ್ ಕಾಲೇಜಿನಲ್ಲಿ ಪ್ರವೇಶಾತಿ ಪಡೆದುಕೊಂಡಿದ್ದಾನೆ.
    ಕು. ಚಂದ್ರಕಾAತ ಬೆಲ್ಲದ ಈತನು JOB Placement  Program  ನ ತರಬೇತಿಯ ಅವಧಿಯಲ್ಲಿ ಬೆಂಗಳೂರಿನ ಪ್ರಸಿದ್ಧ ಕಂಪನಿಯಾದ Northern Trust ನಲ್ಲಿ   Financial Analyst ಆಗಿ ಸೇರ್ಪಡೆಗೊಂಡಿದ್ದಾರೆ. ಉಳಿದ ವಿದ್ಯಾರ್ಥಿಗಳು ತರಬೇತಿ ಮುಗಿದ ನಂತರ ಕಂಪನಿಗಳಿಗೆ ಸೇರ್ಪಡೆಗೊಳ್ಳಲಿದ್ದಾರೆ.
    ಕೌಶಲ್ಯ ತರಬೇತಿಯನ್ನು ನೀಡಿದ AITA-HUB, Banglore ಹಾಗೂ ಯಶಸ್ಸನ್ನು ಗಳಿಸಿದ 3 ವಿದ್ಯಾರ್ಥಿಗಳಿಗೆ ಎಮ್.ಇ.ಎಸ್. ಆಡಳಿತ ಮಂಡಳಿ, ಕಾಲೇಜಿನ ಉಪಸಮಿತಿ, ಪ್ರಾಚಾರ್ಯರು ಹಾಗೂ ಕಾಲೇಜಿನ ಉಪನ್ಯಾಸಕರು ಹರ್ಷ ವ್ಯಕ್ತಪಡಿಸಿ ಹಾರ್ದಿಕ ಅಭಿನಂದನೆಗಳನ್ನು ತಿಳಿಸಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Back to top