• first
  second
  third
  previous arrow
  next arrow
 • ದೋಟಿಯಲ್ಲಿ ಮದ್ದು ಸಿಂಪಡಣೆ: ಹೆಗಡೆಕಟ್ಟಾ ಭಾಗದಲ್ಲಿ ವ್ಯಾಪಕ ಪ್ರಶಂಸೆ

  300x250 AD

  ಶಿರಸಿ: ತಾಲೂಕಿನ ಹೆಗಡೆಕಟ್ಟಾ ಸೇವಾ ಸಹಕಾರಿ ಸಂಘದಿಂದ ಅಡಿಕೆ ಕೊಳೆ ರೋಗಕ್ಕೆ ಮದ್ದು ಸಿಂಪಡಣೆಯನ್ನು ದೋಟಿಯ ಮೂಲಕ ರೈತರ ತೋಟಗಳಲ್ಲಿ ಮಾಡಿಸಿಕೊಡುತ್ತಿದ್ದು, ಸಂಘದ ಈ ಕಾರ್ಯವು ಹೆಗಡೆಕಟ್ಟಾ ಭಾಗದ ರೈತರಿಂದ ವ್ಯಾಪಕ ಪ್ರಶಂಸೆಗೆ ಒಳಗಾಗಿದೆ. ಮಳೆಗಾಲ ಪೂರ್ವ ಮದ್ದು ಸಿಂಪಡಣೆ ಹಾಗೂ ಮಳೆಗಾಲ ಆರಂಭದಲ್ಲಿ ಬೋರ್ಡೋ ಸಿಂಪಡಣೆಯ ಕಾರ್ಯವನ್ನು ಸೊಸೈಟಿ ಯೋಗ್ಯ ದರದಲ್ಲಿ ನಡೆಸಿಕೊಡುತ್ತಿದೆ. ಮಳೆಗಾಲ ಆರಂಭವಾದ ಕೂಡಲೇ ಒಂದೇ ಬಾರಿ ಕೆಲಸಗಾರರ ತುಟಾಗ್ರತೆ ಉಂಟಾಗುತ್ತಿದ್ದು, ಈ ಕೊರತೆಯನ್ನು ನೀಗಿಸಲು ಸಂಘವು ಈ ತಂತ್ರಜ್ಞಾನದ ಮೊರೆ ಹೋಗಿದೆ ಇದರಿಂದ ಸಂಘದ ರೈತರಿಗೆ ಹಾಗೂ ಹೆಗಡೆಕಟ್ಟಾ ಭಾಗದ ರೈತರಿಗೆ ಅನುಕೂಲವಾಗುತ್ತಿದೆ ಎಂದು ಹೆಗಡೆಕಟ್ಟಾ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಂ.ಪಿ.ಹೆಗಡೆ ಕೊಟ್ಟೆಗದ್ದೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಂಘವು ಗ್ರಾಮೀಣ ಭಾಗದಲ್ಲಿ ಇಂತಹ ಹಲವು ರೈತ ಉಪಯೋಗಿ ಯೋಜನೆ, ಯೋಚನೆ ಕಾರ್ಯಗತಗೊಳಿಸುವತ್ತ ಮುಂದುವರಿಯುತ್ತಿದೆ ಎಂದಿದ್ದಾರೆ.
  ಮದ್ದು ಸಿಂಪಡಣೆಯನ್ನು ಹೆಗಡೆಕಟ್ಟಾ ಸೊಸೈಟಿ ರೈತರಷ್ಟೇ ಅಲ್ಲದೆ ಹೆಗಡೆಕಟ್ಟಾ ಭಾಗದ ರೈತರು ಸಂಘದ ವತಿಯಿಂದ ಮಾಡಿಸಿಕೊಳ್ಳುತ್ತಿದ್ದಾರೆ. ಇದರಿಂದ ಸಾಂಪ್ರದಾಯಿಕವಾಗಿ ಕಳೆದ ವರ್ಷಗಳಿಂದ ಬರುತ್ತಿದ್ದ ಖರ್ಚು ಕೂಡ ಕಡಿಮೆಯಾಗಿ ಉಳಿತಾಯವಾಗುತ್ತಿದೆ, ಅಡಿಕೆ ಗೊನೆಯ ನಾಲ್ಕೂ ಭಾಗಕ್ಕೆ ಮದ್ದು ಸಿಂಪಡಣೆ ಆಗುತ್ತದೆ ಮುಂದಿನ ದಿನಗಳಲ್ಲಿ ಇದೇ ಉಪಯುಕ್ತ ವಿಧಾನ ಎನಿಸಲಿದೆ ಎಂದು ರೈತರಾದ ಶ್ರೀಧರ ಹೆಗಡೆ ಮರಿಯಜ್ಜನಮನೆ, ಸುಬ್ರಾಯ ಹೆಗಡೆ ಮೂಡ್ಗಾರ, ಮಾಬ್ಲೇಶ್ವರ ಹೆಗಡೆ ಕರಡಿಕೈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಭಾರತೀಯ ವಿಜ್ಙಾನ ಸಂಸ್ಥೆಯಲ್ಲಿ ಭೌತ ವಿಜ್ಙಾನಿ ಆಗಿರುವ ಕಲ್ಲಗದ್ದೆಯ ಡಾ. ಗೋಪಾಲಕೃಷ್ಣ ಹೆಗಡೆ ಸಮಯಕ್ಕೆ ಸರಿಯಾಗಿ ಹೆಗಡೆಕಟ್ಟಾ ಸೇವಾ ಸಹಕಾರಿ ಸಂಘದ ರೈತಪರ ಈ ಮದ್ದು ಸಿಂಪಡಣೆಯ ಕಾರ್ಯವನ್ನು ಶ್ಲಾಘಿಸಿದ್ದಾರೆ.

  ಮಳೆಗಾಲದಲ್ಲಿ ಏಕ ಕಾಲದಲ್ಲಿ ಆಗುವ ಕೆಲಸಗಾರರ ಕೊರತೆ ನೀಗಿಸಲು ಸಂಘವು ಮದ್ದು ಸಿಂಪಡಣೆ ಕಾರ್ಯವನ್ನು ಕಳೆದ ವರ್ಷದಿಂದಲೇ ನಡೆಸಿಕೊಂಡು ಬಂದಿದೆ.– ಎಂ.ಪಿ.ಹೆಗಡೆ ಕೊಟ್ಟೆಗದ್ದೆ ಅಧ್ಯಕ್ಷರು

  300x250 AD

  ಮದ್ದು ಸಿಂಪಡಣೆ ಮಾಡಿಸಿಕೊಡುತ್ತಿರುವ ಹೆಗಡೆಕಟ್ಟಾ ಸೊಸೈಟಿ ಕಾರ್ಯ ರೈತರಿಗೆ ಮತ್ತು ಬೆಂಗಳೂರು ಸೇರಿದಂತೆ ಹೊರಗೆ ವಾಸಿಸಿ ಜಮೀನು ಹೊಂದಿರುವವರಿಗೆ ತುಂಬಾ ಅನುಕೂಲವೆನಿಸಿದೆ.– ಡಾ. ಗೋಪಾಲಕೃಷ್ಣ ಹೆಗಡೆ ವಿಜ್ಙಾನಿ ಭಾರತೀಯ ವಿಜ್ಙಾನ ಸಂಸ್ಥೆ

  Share This
  300x250 AD
  300x250 AD
  300x250 AD
  Back to top