ಶಿರಸಿ: ಮಣ್ಣೆತ್ತಿನ ಅಮಾವಾಸ್ಯೆ ಪ್ರಯುಕ್ತ ದಿಂಡಿ ಉತ್ಸವ ಹಾಗು ಶ್ರೀ ಗುರುಗಳ ಶೀಲಾಮೂರ್ತಿ ಪ್ರತಿಷ್ಠಾಪನಾ 41 ನೇ ದಿನದ ಮಂಡಲಾಭಿಷೇಕ ಪೂಜಾ ಕಾರ್ಯಕ್ರಮವು ಜೂ.೨೯ ಬುಧವಾರದಂದು,ಕ್ಯಾದಗಿಕೊಪ್ಪದ ಶ್ರೀ ಸದ್ಗುರು ಅವಧೂತ ಕಲ್ಲೇಶ್ವರ ಮಹಾಸ್ವಾಮಿಗಳ ಶ್ರೀ ಕ್ಷೇತ್ರ, ಶ್ರೀ ಗುರುಮಠದಲ್ಲಿ ಶೃದ್ಧಾಭಕ್ತಿಯಿಂದ ನೆರವೇರಿತು. ದಿಂಡಿ ಉತ್ಸವವು ಪ್ರತಿವರ್ಷದಂತೆ ಈ ವರ್ಷವೂ ಸಹ ಹಾನಗಲ್ ತಾಲ್ಲೂಕಿನ ಹರಿಮಂದಿರದಿಂದ್ದ ನೂರಾರು ಸಂತರಿಂದ ಹೊರಟ ಉತ್ಸವವು ಕಾಲನಡಿಗೆಯಲ್ಲಿ ಶ್ರೀಗುರುಮಠ ಅಂಡಗಿಗೆ ಮಧ್ಯಾಹ್ನ12ಗಂಟೆಗೆ ತಲುಪಿತು. ಶ್ರೀಗುರುಮಠದ ಮಹಾದ್ವಾರದಿಂದ ಭವ್ಯ ಮೆರವಣಿಗೆಯಲ್ಲಿ ನೂರಾರು ಭಕ್ತರೊಂದಿಗೆ ಭಜನೆ ಹಾಗು ನಾಮಸ್ಮರಣೆ ಮೂಲಕ ಗುರುಮಠಕ್ಕೆ ಕರೆತರಲಾಯಿತು ನಂತರ ದಿಂಡಿ ಉತ್ಸವಕ್ಕೆ ಮಂಗಳಾರತಿ ನೆರವೇರಿಸಲಾಯಿತು.ಶ್ರೀ ಗುರುವಿನ ಮೂರ್ತಿ ಪ್ರತಿಷ್ಠಾಪನಾ 41ನೇ ದಿನದ ಮಂಡಲಾಭಿಷೇಕ ಪೂಜೆ,ಹೋಮ ನೆರವೇರಿಸಿ,ಮಹಾಮಂಗಳಾರತಿ ಮಾಡಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಾವಿರಾರು ಭಕ್ತರಿಗೆ ಅನ್ನಪ್ರಸಾದ ಸೇವೆಯನ್ನು ನೆರವೇರಿಸಲಾಯಿತು.
ವೈಭವೋಪೇತದಿಂದ ನೆರವೇರಿದ ದಿಂಡಿ ಉತ್ಸವ
