ಸಿದ್ದಾಪುರ: ತಾಲೂಕಿನ ಗಾಳಿಜಡ್ಡಿ ಸ.ಹಿ.ಪ್ರಾ ಶಾಲೆಯಲ್ಲಿ ಹಲವು ವರ್ಷ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಶಿಕ್ಷಕಿಯರಾದ ಸುಮಾ ಹೆಗಡೆ ಹಾಗೂ ರಾಗಿಣಿ ಅವರನ್ನು ಎಸ್‌ಡಿಎಂಸಿ ವತಿಯಿಂದ ಅಭಿನಂದಿಸಿ ಬೀಳ್ಕೊಡಲಾಯಿತು. ಎಸ್‌ಡಿಎಂಸಿ ಅಧ್ಯಕ್ಷ ಲಕ್ಷ್ಮಿನಾರಾಯಣ ಹೆಗಡೆ ಮಟ್ಟೆಮನೆ, ಟಿಎಸ್‌ಎಸ್‌ನ ಮಾಜಿ ನಿರ್ದೇಶಕ ರವೀಂದ್ರ ಹೆಗಡೆ ಹಿರೇಕೈ, ರಘುಪತಿ ಹೆಗಡೆ ಹೂಡೆಹದ್ದ,ಮುಖ್ಯ ಶಿಕ್ಷಕ ವಿ.ಜಿ.ನಾಯ್ಕ, ಎಸ್‌ಡಿಎಂಸಿ ಪದಾಧಿಕಾರಿಗಳು ಹಾಗೂ ಊರವರು ಇದ್ದರು. ಸಹನಾ ಹೆಗಡೆ ಹೂಡೆಹದ್ದ ನಿರ್ವಹಿಸಿದರು.
ವರ್ಗಾವಣೆಗೊಂಡ ಶಿಕ್ಷಕಿಯರಿಗೆ ಬೀಳ್ಕೊಡುಗೆ
