ಶಿರಸಿ: ಲೋಕಕಲ್ಯಾಣಾರ್ಥವಾಗಿ ನಡೆಸುತ್ತಿರುವ ಸಹಸ್ರಮೋದಕ ಹವನ ಕಾರ್ಯಕ್ರಮದ ಪ್ರಯುಕ್ತ ನಗರದ ರಾಘವೇಂದ್ರ ಸಭಾಭವನದಲ್ಲಿ ಜುಲೈ 3ರಂದು ಮಧ್ಯಾಹ್ನ 4ಕ್ಕೆ ‘ತೆರೆಮರೆ ಸಾಧಕರ ಸನ್ಮಾನ’ ಹಾಗೂ ‘ಸಾಂಸ್ಕೃತಿಕ ಕಾರ್ಯಕ್ರಮ’ ನಡೆಯಲಿದೆ.
ಧಾರ್ಮಿಕ ಹಾಗೂ ಸಾಮಾಜಿಕ ಮತ್ತು ಕಲೆ ಸಂಸ್ಕೃತಿ , ಶಿಕ್ಷಣ ದಂತಹ ಅನೇಕ ಸಾಮಾಜಿಕ ಒಳ್ಳೆ ಧ್ಯೇಯೋದ್ದೇಶಗಳನ್ನು ಹೊಂದಿದ ಪ್ರಜ್ವಲ ಟ್ರಸ್ಟ್ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿದ್ದು, ಸಂಗೀತ, ನೃತ ಹಾಗೂ ಗಾಯನ ಕಾರ್ಯಕ್ರಮ ನಡೆಯಲಿದೆ. ಸಾಗರದ ಖ್ಯಾತ ಹಿಂದುಸ್ತಾನಿ ಗಾಯಕಿ ವಸುಧಾಶರ್ಮಾ ಅವರಿಂದ ಗಾನ ಸೇವೆ ನಡೆಯಲಿದ್ದು ಅವರಿಗೆ ಗುರುರಾಜ್ ಆಡುಕಳ ತಬಲಾದಲ್ಲಿ ಮತ್ತು ಸತೀಶ್ ಹೆಗ್ಗಾರ್ ಹಾರ್ಮೋನಿಯಂನಲ್ಲಿ ಸಾಥ್ ನೀಡಲಿದ್ದಾರೆ.
ಖ್ಯಾತ ಗಾಯಕಿ ಶ್ರೀಲತಾ ಗುರುರಾಜ್ ಅವರಿಂದ ಭಾವಾಂತರಂಗ ಗಾಯನ ನಡೆಯಲಿದೆ. ಮೈತ್ರೇಯಿ ಕಲಾಟ್ರಸ್ಟ್ ವತಿಯಿಂದ ವಿದೂಷಿ ಸೌಮ್ಯಾ ಪ್ರದೀಪ ಅವರ ನೇತೃತ್ವದಲ್ಲಿ ನೃತ್ಯ ರೂಪಕ, ವಿಶೇಷವಾಗಿ ಸ್ನೇಹಶ್ರೀ ಹೆಗಡೆ ಅವರಿಂದ ಕುಚಿಪುಡಿ ನೃತ್ಯ ಪ್ರದರ್ಶನ ನಡೆಯಲಿದೆ ಎಂದು ಟ್ರಸ್ಟ್ ಅಧ್ಯಕ್ಷೆ ಬಿಂದು ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜು.3ಕ್ಕೆ ‘ತೆರೆಮರೆ ಸಾಧಕರ ಸನ್ಮಾನ’ , ‘ಸಾಂಸ್ಕೃತಿಕ ಕಾರ್ಯಕ್ರಮ’
