• Slide
    Slide
    Slide
    previous arrow
    next arrow
  • ಪರ್ಯಾಯ ಬಸ್ ವ್ಯವಸ್ಥೆ ಕಲ್ಪಿಸಲು ಗ್ರಾಮಸ್ಥರಿಂದ ಮನವಿ

    300x250 AD

    ಶಿರಸಿ: ಶಾಲಾಕಾಲೇಜುಗಳಿಗೆ ತೆರಳಲು ವಿದ್ಯಾರ್ಥಿಗಳಿಗೆ ಪರ್ಯಾಯ ಬಸ್ ವ್ಯವಸ್ಥೆ ಒದಗಿಸುವಂತೆ ಮಕ್ಕಳ ಪಾಲಕರು ಬಿಸಲಕೊಪ್ಪ ಗ್ರಾಮ ಪಂಚಾಯತಿಗೆ ಮನವಿ ಮಾಡಿದ್ದಾರೆ.

    ಗ್ರಾಮ ಪಂಚಾಯತಿಗೆ ಬುಧವಾರ ಭೇಟಿ ಕೊಟ್ಟ ಪಾಲಕರು ಗ್ರಾಮ ಪಂಚಾಯತಿ ವತಿಯಿಂದ ಕೆ.ಎಸ್.ಆರ್.ಟಿ.ಸಿ.ಅಧಿಕಾರಿಗಳಿಗೆ ಬಸ್ ಸೌಲಭ್ಯ ಒದಗಿಸಲು ಮನವಿ ಮಾಡುವಂತೆ ವಿನಂತಿಸಿದ್ದಾರೆ.

    ಬಿಸಲಕೊಪ್ಪ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳು ಬಿಸಲಕೊಪ್ಪದಿಂದಲೇ ಬಸ್ ಗಳನ್ನು ಹತ್ತಿ ನಗರಕ್ಕೆ ಬರುವ ಅನಿವಾರ್ಯತೆ ಇದೆ, ಹಾವೇರಿ ಹಾಗೂ ಹುಬ್ಬಳ್ಳಿ ಮಾರ್ಗದಿಂದ ಬರುವ ಬಸ್ ಗಳು ಜನರಿಂದ ಭರ್ತಿಯಾಗಿ ಬರುವುದರಿಂದ ಹತ್ತಲು ಸ್ಥಳವಕಾಶ ಇಲ್ಲದೆ ಕೆಲವು ಬಸ್ ಗಳು ನಿಲ್ಲಿಸುತ್ತಿಲ್ಲ. ಶಾಲಾ ಕಾಲೇಜುಗಳು ಮುಂಜಾನೆ 9.30 ಕ್ಕೆ ಆರಂಭವಾಗುವುದರಿಂದ ಶಾಲಾ ಸಮಯಕ್ಕೆ ತಲುಪುಲು ಮಕ್ಕಳಿಗೆ ಆಗುತ್ತಿಲ್ಲ. ಆ ದೃಷ್ಟಿಯಿಂದ ಬಿಸಲಕೊಪ್ಪಕ್ಕೆ ಮುಂಜಾನೆ 8.30ಕ್ಕೆ ಪರ್ಯಾಯ ಬಸ್ ಸೌಲಭ್ಯ ಓದಗಿಸಿ ವಿದ್ಯಾರ್ಥಿಗಳ ಸುರಕ್ಷತೆ ಹಾಗೂ ಕಲಿಕೆಗೆ ಅನುಕೂಲ ಮಾಡಿಕೊಡಬೇಕೆಂದು ಮನವಿಯಲ್ಲಿ ವಿನಂತಿಸಿದ್ದಾರೆ..

    300x250 AD

    ಈ ವೇಳೆ ಗ್ರಾಮಸ್ಥರಾದ ಸುನೀಲ್ ನಾಯ್ಕ,ವಿ.ಎಮ್. ಬೈಂದೂರು,ಮಹಾಬಲೇಶ್ವರ ಹೆಬ್ಬಳ್ಳಿ,ಪ್ರಶಾಂತ ನಾಯ್ಕ, ಬಸ್ತಾಂವ್ ಲೊಪಿಸ್,ಮಂಜು ನಾಯ್ಕ, ಸದಾನಂದ ನಾಯ್ಕ ಸೇರಿದಂತೆ ಇನ್ನಿತರರು ಹಾಜರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top