• Slide
    Slide
    Slide
    previous arrow
    next arrow
  • ಮಹಿಳೆ ಬ್ಯಾಗಿನಿಂದ ಬಂಗಾರ,ನಗದು ದೋಚಿದ್ದ 3 ಆರೋಪಿಗಳ ಬಂಧನ

    300x250 AD

    ಕುಮಟಾ; ಬಸ್ ನಿಲ್ದಾಣದಲ್ಲಿ ಮಹಿಳೆಯ ಬ್ಯಾಗಿನಿಂದ ಬಂಗಾರದ ಆಭರಣ ಹಾಗೂ ನಗದನ್ನು ಎಗರಿಸಿದ್ದ ಮೂವರು ಮಹಿಳಾ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

    ಜೂನ್ 21ರಂದು ಭಟ್ಕಳದ ತೇರನಮಕ್ಕಿಯ ಮಂಗಲಾ ಪಟ್ಟಣದ ಬಸ್ ನಿಲ್ದಾಣದಲ್ಲಿ ಬಸ್ ಹತ್ತುವ ವೇಳೆ ಅವರ ಬ್ಯಾಗ್‌ನ ಜಿಪ್ ತೆರೆದು ಅದರಲ್ಲಿದ್ದ ಸುಮಾರು 124 ಗ್ರಾಂ ತೂಕದ ಬಂಗಾರದ ಆಭರಣಗಳು ಮತ್ತು 50 ಸಾವಿರ ರೂಪಾಯಿ ನಗದನ್ನು ಕಳ್ಳರು ಕದ್ದು ಪರಾರಿಯಾಗಿದ್ದರು.

    ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಕುಮಟಾ ಪೊಲೀಸರು ಬೆಂಗಳೂರಿನ ಅತ್ತಿಬೆಲೆ ನಿವಾಸಿಗಳಾದ ಆದಿಯಮ್ಮ ತಿರುಪತಿ, ವೆಂಕ್ಟಮ್ಮ ತಿರುಪತಿ ಹಾಗೂ ಲಲಿತಾ ನಾಗರಾಜ ಇವರುಗಳನ್ನು ದಸ್ತಗಿರಿ ಮಾಡಿ, ಆಪಾದಿತರಿಂದ ಕಳ್ಳತನವಾಗಿರುವ ಎಲ್ಲಾ ಬಂಗಾರದ ಆಭರಣಗಳನ್ನು ಮತ್ತು ನಗದನ್ನು ಜಪ್ತು ಮಾಡಿಕೊಂಡಿದ್ದಾರೆ.

    300x250 AD

    ಪಿಐ ತಿಮ್ಮಪ್ಪ ನಾಯ್ಕ, ಪಿಎಸ್‌ಐಗಳಾದ ಪದ್ಮಾ ದೇವಳಿ, ನವೀನ್ ನಾಯ್ಕ ಸೇರಿದಂತೆ ಸಿಬ್ಬಂದಿ ಪತ್ತೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಭಾಗಿಯಾದ ಎಲ್ಲಾ ಅಧಿಕಾರಿ, ಸಿಬ್ಬಂದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ ಪೆನ್ನೇಕರ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top