ಸಿದ್ದಾಪುರ:ತಾಲೂಕಿನ ನಾಣಿಕಟ್ಟಾದ ತ್ಯಾಗಲಿ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘ, ನಿ. ‘ಶತಸಂಪನ್ನ ಸಭಾಭವನ’ದಲ್ಲಿ ಜುಲೈ 2, ಶನಿವಾರ ಮಧ್ಯಾಹ್ನ 4-00 ಗಂಟೆಗೆ ಪೋಲಿಸ್ ಜನ ಸಂಪರ್ಕ ಸಭೆಯನ್ನು ಏರ್ಪಡಿಸಲಾಗಿದೆ.ಪೋಲಿಸ್ ಇಲಾಖೆಯ ಶಿರಸಿ ಡಿ.ವಾಯ್.ಎಸ್.ಪಿ ಶಿರಸಿ ಉಪ ವಿಭಾಗ ರವಿ ನಾಯ್ಕ, ಸಿದ್ದಾಪುರ ತಾಲೂಕ ಪೋಲಿಸ್ ನಿರೀಕ್ಷಕರಾದ ಕುಮಾರ ಕೆ ಹಾಗೂ ಪೊಲೀಸ್ ಉಪನಿರೀಕ್ಷರಾದ ಮಾಂತಪ್ಪ ಕುಂಬಾರ್ ಮಲ್ಲಿಕಾರ್ಜುನ್ ಕೊರಾಣಿ ಹಾಗೂ ಬಿಟ್ ಸಿಬ್ಬಂದಿಗಳು ಆಗಮಿಸಿ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಲಿದ್ದು , ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸದುಪಯೋಗಪಡಿಸಿಕೊಳ್ಳಬೇಕಾಗಿ ತ್ಯಾಗಲಿ ಸೇವಾ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಾಹಕ ಸುಧಾಕರ ಜಿ ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜು.2ಕ್ಕೆ ಪೋಲಿಸ್ ಜನಜಾಗ್ರತಿ ಸಭೆ
