• first
  second
  third
  previous arrow
  next arrow
 • ಮನೆ ಕಳೆದುಕೊಂಡ ಸಂತ್ರಸ್ತರಿಗೆ ಸ್ವಂತ ಖರ್ಚಿನಲ್ಲಿ ತಗಡು, ಪಾಟಿಕಲ್ಲು ವಿತರಿಸಿದ ಭೀಮಣ್ಣ ನಾಯ್ಕ

  300x250 AD

  ಶಿರಸಿ: ರೇವಣಕಟ್ಟಾ ಗ್ರಾಮಕ್ಕೆ ಮತ್ತೊಮ್ಮೆ ಭೇಟಿ ನೀಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ ಅಲ್ಲಿನ ನಿರಾಶ್ರಿತರಿಗೆ ಸೂರು ನಿರ್ಮಿಸಿಕೊಳ್ಳಲು ಸ್ವಂತ ಖರ್ಚಿನಿಂದ ಜಿಂಕ್ ಶೀಟ್ ತಗಡುಗಳನ್ನು ನೀಡಿ, ಪಾಟಿಕಲ್ಲುಗಳನ್ನು ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಿದರು.
  ಈ ಸಂದರ್ಭದಲ್ಲಿ ಮಾತನಾಡಿ, ಧಾರಕಾರ ಮಳೆಯಿಂದಾಗಿ ನೆರೆಯ ರಭಸಕ್ಕೆ ಮನೆಗಳು ಕುಸಿದು ಬಿದ್ದಿದೆ, ಜನಪ್ರತಿನಿಧಿಗಳಾದವರು ಇಂತಹ ಸಂಧರ್ಭದಲ್ಲೂ ಕ್ಷೇತ್ರವನ್ನು ಮತ್ತು ಕ್ಷೇತ್ರದ ಜನರನ್ನು ಮರೆತಂತಿದೆ, ನಿಜಕ್ಕೂ ಇದೊಂದು ಬೇಸರದ ಸಂಗತಿ ಎಂದರು. ಈ ಕಾರ್ಯಕ್ರಮದ ನಂತರದಲ್ಲಿ ಮಾವಿನಜಡ್ಡಿ ಎಂಬ ಗ್ರಾಮದ ಕಮಲಿ ಹನುಮಂತ ಗೌಡ ಮತ್ತು ಅಮ್ಮಿನಳ್ಳಿ ಗ್ರಾಮದ ನಾರಾಯಣ ಹನುಮಂತ ನಾಯ್ಕ ಎಂಬುವವರ ಮನೆ ಕುಸಿದಿರುವುದನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ಎಸ್.ಕೆ.ಭಾಗವತ್‍ರು ಮತ್ತು ತಾಲೂಕಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ ಗೌಡರು ಹಾಗೂ ಸ್ಥಳೀಯ ಮುಖಂಡ ವಿ.ಎಂ.ಹೆಗಡೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

  300x250 AD
  Share This
  300x250 AD
  300x250 AD
  300x250 AD
  Back to top