ಶಿರಸಿ: ತಾಲೂಕಿನ ಅಮ್ಮಿನಳ್ಳಿಯ ಶ್ರೀ ನಾಗಚೌಡೇಶ್ವರಿ ಗೆಳೆಯರ ಬಳಗದಿಂದ ಗ್ರಾಮದಲ್ಲಿ 2021-22ನೇ ಸಾಲಿನಲ್ಲಿ 90ಕ್ಕೂ ಹೆಚ್ಚು ಪ್ರತಿಶತ ಅಂಕ ಪಡೆದ ಸಂಪಖಂಡ ಶ್ರೀ ಗಜಾನನ ಪ್ರೌಢಶಾಲೆಯ ಎಂಟು ಹಾಗೂ ಸ್ಥಳೀಯ ಈರ್ವರು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಪಖಂಡ ಪ್ರೌಢಶಾಲೆಯ ನಿವೃತ್ತ ಮುಖ್ಯಾಧ್ಯಾಪಕ ಜಿ.ಎನ್.ಹೆಗಡೆ ವಹಿಸಿಕೊಂಡಿದ್ದರು. ಜಾನ್ಮನೆ ಗ್ರಾ.ಪಂ ಸದಸ್ಯ ರಘುಪತಿ ಭಟ್ ಕಾರ್ಯಕ್ರಮ ಉದ್ಘಾಟಿಸಿದರು.
ಶ್ರೀ ನಾಗಚೌಡೇಶ್ವರಿ ಗೆಳೆಯರ ಬಳಗದಿಂದ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ
