ಶಿರಸಿ: ಯಕ್ಷಪ್ರೇಮಿಗಳ ಮನ ರಂಜಿಸಲು ವಿಶೇಷ ಸಂಯೋಜನೆಯ ಎರಡು ಪೌರಾಣಿಕ ಯಕ್ಷಗಾನವನ್ನು ಜು.3 ರವಿವಾರದಂದು ವಿದ್ಯಾಧಿರಾಜ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದೆ. ರಾತ್ರಿ 9ಕ್ಕೆ ಕಾರ್ಯಕ್ರಮ ಪ್ರಾರಂಭವಾಗಲಿದ್ದು ‘ಮೋಹ ಮೇನಕೆ’ ಹಾಗೂ ‘ಚಂದ್ರಾವಳಿ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ .
ಹಿಮ್ಮೇಳದಲ್ಲಿ ಹೆರಂಜಾಲು ಹಿಲ್ಲೂರು,ಶಂಕರ ಭಗವತ್,ಪರಮೇಶ್ವರ್ ಭಂಡಾರಿ,ಗಣೇಶ್ ಗಾಂವ್ಕರ್,ಪ್ರಸನ್ನಹೆಗ್ಗಾರ್ ಉಪಸ್ಥಿತರಿದ್ದು, ಮುಮ್ಮೇಳದಲ್ಲಿ,ರಮೇಶ ಭಂಡಾರಿ,ಶ್ರೀಧರ್ ಕಾಸರಕೋಡು,ಮಹಾಬಲೇಶ್ವರ್ ಕ್ಯಾದಗಿ, ,ಶಶಿಕಾಂತ್ ಶೆಟ್ಟಿ,ಶಂಕರ್ ನೀಲ್ಕೋಡು,ಪ್ರಸನ್ನ ಶೆಟ್ಟಿಗಾರ್,ಉದಯ್ ಕಡಬಾಳ,ಕಾರ್ತಿಕ್ ಚಿಟ್ಟಾಣಿ,ಸನ್ಮಯ ಭಟ್,ಪ್ರಣವ್ ಭಟ್,ಕಾರ್ತಿಕ್ ಕಣ್ಣಿಮನೆ,ಗಣಪತಿ ಭಟ್ ಮುಂತಾದವರು ಕಾಣಿಸಿಕೊಳ್ಳಲಿದ್ದಾರೆ.ಕಲಾಸಕ್ತರು ಆಗಮಿಸಿ ಕಾರ್ಯಕ್ರಮ ಚಂದಗಾಣಿಸಲು ಪ್ರಕಟಣೆಯಲ್ಲಿ ಕೋರಲಾಗಿದೆ.
ಜು.3ಕ್ಕೆ ಅಪರೂಪ ಸಂಯೋಜನೆಯ ಯಕ್ಷಗಾನ ಕಾರ್ಯಕ್ರಮ
