ಗೋಕರ್ಣ:ನವೀಕರಣಗೊಂಡ ಕೋಟಿತೀರ್ಥ ಸ್ವಚ್ಛ ನೀರಿನಿಂದ ಕಂಗೊಳಿಸುತ್ತಿದ್ದು, ಹೆಚ್ಚೆಚ್ಚು ಜನರನ್ನು ಆಕರ್ಷಿಸುತ್ತಿದೆ.ಇದರ ಬೆನ್ನಲ್ಲೆ ದುರಂತವೊoದು ನಡೆದಿದ್ದು, ಕೋಟಿ ತೀರ್ಥದಲ್ಲಿ ಮುಳುಗಿ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ. ಮೃತ ವ್ಯಕ್ತಿಯನ್ನು ಗೋಕರ್ಣದ ಮೇಲಿನಕೇರಿ ನಿವಾಸಿ ಸಂತೋಷ ರೆಬೆಲೋ ಎಂದು ಗುರುತಿಸಲಾಗಿದೆ.
ಕೋಟಿತೀರ್ಥಕ್ಕೆ ತೆರಳಿದ ಸಂದರ್ಭದಲ್ಲಿ ಕಾಲುಜಾರಿಬಿದ್ದು ಅವಘಡ ಸಂಭವಿಸಿದೆ ಎನ್ನಲಾಗಿದೆ. ಈ ಕುರಿತು ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಿಸಿದ್ದಾರೆ.
ಕೋಟಿತೀರ್ಥದಲ್ಲಿ ಮುಳುಗಿ ವ್ಯಕ್ತಿ ಸಾವು
