• Slide
    Slide
    Slide
    previous arrow
    next arrow
  • ಸರಕಾರಿ ಕಛೇರಿಗೆ ಉರ್ದುವಿನಲ್ಲಿ ಬೋರ್ಡ್ ಹಾಕಿ ಧಾಷ್ಟ್ರ್ಯ ತೋರಿದ ತಂಜೀಂ ಬೆಂಬಲಿತ ಭಟ್ಕಳ ಪುರಸಭೆ

    300x250 AD

    ಭಟ್ಕಳ: ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಪುರಸಭೆಗೆ ಉರ್ದುವಿನಲ್ಲಿ ನಾಮಫಲಕ ಹಾಕಿದ್ದು ತೀವ್ರ ವಿವಾದಕ್ಕೆ ಕಾರಣವಾಗಿದೆ. ಕನ್ನಡ, ಇಂಗ್ಲಿಷ್ ಜೊತೆಗೆ ಉರ್ದುವಿನಲ್ಲಿ ಭಟ್ಕಳ ಪುರಸಭೆಯ ಬೋರ್ಡ್ ಗಳನ್ನ ಬರೆಯಿಸುತ್ತಿರುವುದು ಇದೀಗ ಕನ್ನಡಪರ ಸಂಘಟನೆಗಳ ಆಕ್ರೋಶಕ್ಕೆ ಎಡೆಮಾಡಿಕೊಟ್ಟಿದೆ.

    ಕೆಲ ದಿನಗಳ ಹಿಂದೆಷ್ಟೇ ಭಟ್ಕಳ ಪುರಸಭೆ ಕಟ್ಟಡಕ್ಕೆ ಹೊಸದಾಗಿ ಸುಣ್ಣಬಣ್ಣ ಬಳಿಯುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಇದರ ಮುಂದುವರಿದ ಭಾಗವಾಗಿ ಕಟ್ಟಡದ ಮುಂಭಾಗದಲ್ಲಿ ಪುರಸಭಾ ಕಚೇರಿ, ಭಟ್ಕಳ ಎಂಬ ನಾಮಫಲಕ ಅಳವಡಿಸಲಾಗುತ್ತಿದೆ. ಈ ವೇಳೆ ಕನ್ನಡ, ಇಂಗ್ಲಿಷ್ ಜೊತೆಗೆ ಉರ್ದುವಿನಲ್ಲೂ ನಾಮಫಲಕ ಅಳವಡಿಸುತ್ತಿರುವುದಕ್ಕೆ ಸಾರ್ವಜನಿಕರು ಹಾಗೂ ಕನ್ನಡಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದು, ಉರ್ದು ನಾಮಫಲಕ ತೆರವು ಮಾಡುವಂತೆ ಪುರಸಭೆಯೆದುರು ಪ್ರತಿಭಟಿಸಿವೆ. ಈ ವೇಳೆ ಕಚೇರಿ ಒಳಗೆ ನುಗ್ಗಲು ಯತ್ನಿಸಿದ್ದ ಕನ್ನಡಪರ ಕಾರ್ಯಕರ್ತರನ್ನ ಪೊಲೀಸರು ಚದುರಿಸಿದ್ದಾರೆ.

    ಈ ವೇಳೆ ಮಾತನಾಡಿದ ಮಾಜಿ ಸೈನಿಕ ಶ್ರೀಕಾಂತ ನಾಯ್ಕ, ಸ್ಥಳೀಯ ಎಲ್ಲ ಭಾಷೆಯಲ್ಲಿ ನಾಮಫಲಕಕ್ಕೆ ಎಲ್ಲಿಯೂ ಅವಕಾಶವಿಲ್ಲ. ಹಾಗಿದ್ದರೆ ರಾಜ್ಯದಾದ್ಯಂತ ನಾಮಫಲಕಗಳನ್ನು ಕನ್ನಡ ಇಂಗ್ಲೀಷ್ ಮತ್ತು ಹಿಂದಿ ಈ ಮೂರು ಭಾಷೆಗಳಿಗೆ ಆದ್ಯತೆ ಬಿಟ್ಟು ಬೇರೆ ಯಾವುದೇ ಭಾಷೆಗಳಿಗೆ ಆದ್ಯತೆ ನೀಡಲಾಗುವುದಿಲ್ಲ. ಈ ನಡುವೆ ಪ್ರಾದೇಶಿಕ ಭಾಷೆಗೆ ತಕ್ಕಂತೆ ನಾಮಫಲಕಗಳನ್ನು ಅಳವಡಿಸುತ್ತಾ ಬಂದರೆ ಕೊಂಕಣಿ, ಮರಾಠಿ, ಉರ್ದು, ನವಾಯತ್ ಹೀಗೆ ಹತ್ತು ಹಲವು ಬಾಷೆಗಳಿಗೆ ಆದ್ಯತೆ ನೀಡಬೇಕಾಗುತ್ತದೆ. ಹೀಗೆ ಮಾಡುವುದರಿಂದ ಪ್ರತಿಯೊಂದು ಬೇರೆ ಬೇರೆ ಭಾಷೆಯವರು ಪಟ್ಟು ಹಿಡಿದು ತಾವು ಮಾತನಾಡುವ ಭಾಷೆಯಲ್ಲಿ ನಾಮಫಲಕಗಳಿಗೆ ಬೇಡಿಕೆಯಿಡುತ್ತಾರೆ. ಆಗ ಕರ್ನಾಟಕದ ಕನ್ನಡಕ್ಕೆ ಭಾಷೆಗೆ ಬೆಲೆ ಇಲ್ಲದಂತಾಗುತ್ತದೆ ಎಂದು ಪ್ರತಿಭಟನಾಕರು ತಿಳಿಸಿದ್ದಾರೆ.

    300x250 AD

    ಇನ್ನು ಪುರಸಭೆ ಮುಖ್ಯಾಧಿಕಾರಿಗಳಿಗೆ ಹಾಗೂ ಸಿಪಿಐ ಮಹಾಬಲೇಶ್ವರ ನಾಯ್ಕ ಅವರಿಗೆ ಉರ್ದು ನಾಮಫಲಕ ತೆರವು ಮಾಡಬೇಕೆಂದು ಶ್ರೀಭುವನೇಶ್ವರಿ ಕನ್ನಡ ಸಂಘದಿಂದ ಮನವಿ ಸಲ್ಲಿಸಲಾಗಿದ್ದು, ಸದ್ಯ ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ. ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಮುಂದೇನಾಗಲಿದೆ ಎನ್ನುವುದನ್ನು ಕಾದುನೋಡಬೇಕಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top