ಶಿರಸಿ: ಕರ್ನಾಟಕ ರಾಜ್ಯ ಚೆಸ್ ಅಸೋಸಿಯೇಷನ್ ಪುತ್ತೂರು ತಾಲೂಕಾ ಚೆಸ್ ಪೆಡರೇಷನ್ ಸಹಯೋಗದಲ್ಲಿ ನಡೆಸಿದ ನಡೆಸಿದ 17ವರ್ಷದೊಳಗಿನ ವಿದ್ಯಾರ್ಥಿಗಳ ಮುಕ್ತ ಚೆಸ್ ಪಂದ್ಯಾವಳಿಯಲ್ಲಿ ಶಿರಸಿ ಲಯನ್ಸ ಶಾಲೆಯ 6ನೇ ತರಗತಿ ವಿದ್ಯಾರ್ಥಿ ಅಭಿನೀತ ಭಟ್ 11 ವರ್ಷದೊಳಗಿನ ವಿಭಾಗದಲ್ಲಿ 3ನೇ ಸ್ಥಾನ ಪಡೆದು ಆಕರ್ಷಕ ಟ್ರೋಫಿ ಹಾಗೂ ಪ್ರಮಾಣ ಪತ್ರದೊಂದಿಗೆ ಪುರಸ್ಕೃತನಾಗಿದ್ದಾನೆ.
ಶಿರಸಿ ಲಯನ್ಸ ಶಾಲೆಯ ಮುಖ್ಯಾಧ್ಯಾಪಕ ಶಶಾಂಕ ಹೆಗಡೆ ವಿದ್ಯಾರ್ಥಿಗೆ ಪ್ರಶಸ್ತಿ ಹಾಗೂ ಪ್ರಮಾಣ ಪತ್ರ ವಿತರಿಸಿದರು.
ಸಾಕಷ್ಟು ಮಾನಸಿಕ ಸಾಮರ್ಥ್ಯ, ಬುದ್ಧಿಶಕ್ತಿ ಅಪೇಕ್ಷಿಸುವ ಚದುರಂಗದಂತಹ ಕ್ರೀಡೆಯಲ್ಲಿ ರಾಜ್ಯಮಟ್ಟದ ಸಾಧನೆ ಮೆರೆದ ಕುಮಾರ ಅಭಿನೀತ ಭಟ್ ಹಾಗೂ ಪಾಲಕರಾದ ದತ್ತಾತ್ರೇಯ ಭಟ್ ದಂಪತಿಗಳಿಗೆ ಶಿರಸಿ ಲಯನ್ಸ ಎಜುಕೇಷನ್ ಸೊಸೈಟಿಯ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ಸರ್ವಸದಸ್ಯರು, ಶಿರಸಿ ಲಯನ್ಸ ಕ್ಲಬ್ ಬಳಗ, ಶಿರಸಿ ಲಯನ್ಸ ಶಾಲೆಯ ಮುಖ್ಯಾಧ್ಯಾಪಕರು ಹಾಗೂ ಶಿಕ್ಷಕ-ಶಿಕ್ಷಕೇತರ ವೃಂದ ಹಾರ್ದಿಕವಾಗಿ ಶುಭ ಹಾರೈಸಿದರು.
ರಾಜ್ಯ ಮಟ್ಟದ ಚೆಸ್ : 3ನೇ ಸ್ಥಾನ ಪಡೆದ ಲಯನ್ಸ ಶಾಲೆಯ ಅಭಿನೀತ
