
ಶಿರಸಿ: ರಾಜ್ಯ ಸರಕಾರ ಅಡಿಕೆ ಬೆಳೆಗಾರರಿಗೆ ಸಂಬಂಧಿಸಿ ರಚಿಸಿದ ವಿಶೇಷ ಕಾರ್ಯಪಡೆಗೆ ಯಡಹಳ್ಳಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಜಿ.ಆರ್.ಹೆಗಡೆ ಬೆಳ್ಳೇಕೇರಿ ಅವರನ್ನು ರಾಜ್ಯ ಸರಕಾರ ನೇಮಕಗೊಳಿಸಿದೆ.
ವಿಧಾನ ಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಸೂಚನೆಯ ಮೇರೆಗೆ ಈ ನೇಮಕವಾಗಿದೆ. ಜಿ.ಆರ್. ಹೆಗಡೆ ಅವರು, ಡೆವಲಪ್‍ಮೆಂಟ್ ಸೊಸೈಟಿ ನಿರ್ದೇಶಕರಾಗಿ, ಶಿರಸಿ ಆತ್ಮ ಸಮಿತಿ ಅಧ್ಯಕ್ಷರೂ ಆಗಿ ಕಾರ್ಯ ಮಾಡುತ್ತಿದ್ದಾರೆ.