ಸಿದ್ದಾಪುರ: ಸ್ಥಳೀಯ ಪೊಲೀಸ್ ಠಾಣೆಯ ಆವರಣದಲ್ಲಿ ಪೊಲೀಸ್ ನಿರೀಕ್ಷಕ ಕುಮಾರ್ ಕೆ. ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ದೀನ- ದಲಿತರ ಸಭೆಯಲ್ಲಿ ತಾಲೂಕಿನ ದಲಿತ ಮುಖಂಡರುಗಳು ಹಾಗೂ ಸದಸ್ಯರುಗಳು ಭಾಗವಹಿಸಿದ್ದರು.
ಸಭೆಯಲ್ಲಿ ಹಾಜರಿದ್ದ ಸದಸ್ಯರು ಬೇರೆ ಬೇರೆ ಇಲಾಖೆಗಳ ಸಮಸ್ಯೆಗಳನ್ನು ಸೇರಿದಂತೆ ರವೀಂದ್ರ ನಗರದಲ್ಲಿ ರಾತ್ರಿವೇಳೆಯಲ್ಲಿ ಅಪರಿಚಿತರು ತಿರುಗಾಡುತ್ತಿರುವ ಬಗ್ಗೆ ತಿಳಿಸಿದರು. ಸಭೆಯಲ್ಲಿ ಹಾಜರಿದ್ದ ಪೊಲೀಸ್ ನಿರೀಕ್ಷಕ ಕುಮಾರ್ ಕೆ., ಪೊಲೀಸ್ ಇಲಾಖೆಯಲ್ಲಿ ಈ ಬಗ್ಗೆ ಇರುವ ವ್ಯವಸ್ಥೆ ಹಾಗೂ 112ರ ಬಗ್ಗೆ ಮಾಹಿತಿಯನ್ನು ನೀಡಿ ರಾತ್ರಿ ಬೀಟ್ ಪೊಲೀಸರಿಗೆ ತಿಳಿಸುವ ಬಗ್ಗೆ ಹೇಳಲಾಯಿತು.
ದಲಿತ ಕಾಲೋನಿಯಲ್ಲಿ ವಾಸಿಸುವವರಿಗೆ ಬೇರೆ ಇಲಾಖೆಗಳಲ್ಲಿ ಸಿಗುವ ಸೌಲಭ್ಯಗಳ ಬಗ್ಗೆ ಹಾಗೂ ದಲಿತರಿಗೆ ಕಾನೂನಿನ ಅರಿವು ಇಲ್ಲದೆ ಅಪರಾಧಗಳು ಘಟಿಸುತ್ತಿರುವ ಬಗ್ಗೆ ಚರ್ಚಿಸಲಾಯಿತು. ಮುಂದಿನ ದಿನಗಳಲ್ಲಿ ಕಾನೂನಿನ ಅರಿವನ್ನು ಮೂಡಿಸುವುದು ಹಾಗೂ ಈ ಬಗ್ಗೆ ಕಾರ್ಯಾಗಾರಗಳನ್ನು ತಾಲೂಕು ಮಟ್ಟದಲ್ಲಿಯೂ ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹಮ್ಮಿಕೊಳ್ಳುವ ಬಗ್ಗೆ ಚರ್ಚಿಸಲಾಯಿತು.
ಸಭೆಯಲ್ಲಿ ನಂದನ ಬೋರ್ಕರ್, ಲೋಕೇಶ್ ಚೆನ್ನಯ್ಯ, ಎಚ್.ಕೆ.ಶಿವಾನಂದ, ಗಿರಿಮಲ್ಲಪ್ಪ ತಳವಾರ್, ಕಮಲಾಕರ ಜೋಗಳೇಕರ್, ಪಿಎಸೈ ಮಹಾಂತಪ್ಪ ಕುಂಬಾರ ಪಾಲ್ಗೊಂಡಿದ್ದರು.