• Slide
  Slide
  Slide
  previous arrow
  next arrow
 • ವರದಾ ನದಿಗೆ ಬಾಗಿನ ಅರ್ಪಿಸಿದ ಪ್ರಶಾಂತ್ ದೇಶಪಾಂಡೆ

  300x250 AD

  ಶಿರಸಿ: ತಾಲೂಕಿನ ಪೂರ್ವ ಭಾಗದಲ್ಲಿ ಮಳೆಯಿಂದಾಗಿ ಹಾನಿಗೊಳಗಾದ ಕಲ್ಲಿ, ಸಹಸ್ರಳ್ಳಿ, ಮುಂಡೆಗಳ್ಳಿ, ಮೊಗಳ್ಳಿ, ಅಜ್ಜರಣಿ, ಅಂಡಗಿ, ಹೊಸಕೋಪ್ಪ ಬೆಳ್ಳಿನ ಕೇರಿಯಲ್ಲಿ ಜಮೀನು ಹಾಗೂ ಮನೆಗಳನ್ನು ಹಾಗೂ ರಂಗಾಪುರ ಕೆರೆಯನ್ನು ಕೆಪಿಸಿಸಿ ಸದಸ್ಯ ಹಾಗೂ ಜಿಲ್ಲಾ ಕಾಂಗ್ರೆಸ್ ಯುವನಾಯಕ ಪ್ರಶಾಂತ್ ದೇಶಪಾಂಡೆಯ ವೀಕ್ಷಣೆ ಮಾಡಿ, ನಂತರ ಬನವಾಸಿಯಲ್ಲಿ ವರಾದ ನದಿಗೆ ಬಾಗಿನ ಅರ್ಪಿಸಿದರು.
  ಈ ಸಂದರ್ಭದಲ್ಲಿ ಮಾತನಾಡಿದ ಅವರು ಸರ್ಕಾರದಿಂದ ಬರಬೇಕಾದ ಪರಿಹಾರೊಪಾಯಗಳು ಶೀಘ್ರದಲ್ಲಿ ದೊರೆಯುವುದಕ್ಕೆ ಹಾಗೂ ಮೊಗಳ್ಳಿ ಮತ್ತು ಅಜ್ಜರಣಿಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಸತತವಾಗಿ ಹೋರಾಟ ಮಾಡಿ ಜನಗಳ ಜೊತೆಗೆ ನಿಲ್ಲುವೆ ಎಂದರು.
  ಈ ಸಂದರ್ಭ ಬನವಾಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಪದಾಧಿಕಾರಿಗಳು ಎಲ್ಲಾ ಘಟಕಗಳ ಪದಾಧಿಕಾರಿಗಳು, ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top