ಶಿರಸಿ: ಎಮ್.ಇ.ಎಸ್. ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ವಿವಿಧ ಕ್ರೀಡಾಕೂಟದಲ್ಲಿ ಭಾಗವಹಿಸಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಬಾಲ್ ಬ್ಯಾಡ್ಮಿಂಟನ್ ನಲ್ಲಿ ಕುಮಾರ ಲಖನ್ ಜೈವಂತ,ಕುಮಾರ ನಿಹಾಲ್ ನಾಯ್ಕ,ಕುಮಾರ ಪ್ರಸನ್ನ ಹೆಗಡೆ, ಕುಮಾರಿ ಶ್ರೀನಿಧಿ ಹೆಗಡೆ,ಕುಮಾರಿ ವಿನುತಾ ಯುನಿವರ್ಸಿಟಿ ಬ್ಲೂ ಆಗಿ ಹೊರಹೊಮ್ಮಿದ್ದಾರೆ. ಕುಮಾರಿ ದೀಪ್ತಿ ಭಟ್ಟ,ಯೋಗಾಸನದಲ್ಲಿ,ಕುಮಾರಿ ಸಿಂಚನಾ ಹೆಗಡೆ,ಕುಮಾರಿ ಪೂರ್ಣಿಮಾ ಗುಡಿಗಾರ, ಕುಮಾರ ಅಭಿಷೇಕ ಶಾನಭಾಗ ಚೆಸ್ ನಲ್ಲಿ,ಹಾಗೂ ಕುಮಾರ ಪ್ರಭಾತ ವಾಘ ಟೆಬಲ್ ಟೆನ್ನಿಸ್ ನಲ್ಲಿ ಯುನಿವರ್ಸಿಟಿ ಬ್ಲೂ ಆಗಿದ್ದಾರೆ.
ಈ ವಿದ್ಯಾರ್ಥಿಗಳು ಸೌತ್‌ಝೂನ್ ಅಂತರ ವಿಶ್ವವಿದ್ಯಾಲಯ ಮತ್ತು ಆಲ್ ಇಂಡಿಯಾ ಟೂರ್ನಮೆಂಟಗಳಲ್ಲಿ ಪ್ರತಿನಿಧಿಸಿ ಮಹಾವಿದ್ಯಾಲಯಕ್ಕೆ ಕೀರ್ತಿ ತಂದಿರುತ್ತಾರೆ. ಈ ಎಲ್ಲಾ ಸಾಧನೆಗೆ ಮೊರ್ಡನ್ ಎಜ್ಯುಕೇಶನ್ ಸೊಸೈಟಿ ಅಧ್ಯಕ್ಷರು ಆಡಳಿತ ಮಂಡಳಿ ಪ್ರಾಚಾರ್ಯರು ಹಾಗೂ ಬೋಧಕ- ಬೋಧಕೇತರ ಸಿಬ್ಬಂದಿ ವರ್ಗದವರು ಶುಭ ಕೋರಿ ಇವರ ಈ ಸಾಧನೆ ಹರ್ಷ ವ್ಯಕ್ತಪಡಿಸಿರುತ್ತಾರೆ.
ಎಂ.ಇ.ಎಸ್ ನ 10 ವಿದ್ಯಾರ್ಥಿಗಳಿಗೆ ‘ಯುನಿವರ್ಸಿಟಿ ಬ್ಲೂ’ ಪಟ್ಟ
