ಶಿರಸಿ: ನಗರದ ಪ್ರತಿಷ್ಟಿತ ಎಮ್.ಇ.ಎಸ್. ವಾಣಿಜ್ಯ ಮಹಾವಿದ್ಯಾಲಯದ ಎನ್.ಎಸ್.ಎಸ್. ವಾರ್ಷಿಕ ಶಿಬಿರವನ್ನು ದೊಡ್ನಳ್ಳಿಯ ಶ್ರೀ ಶಂಭುಲಿಂಗೇಶ್ವರ ದೇವಸ್ಥಾನದಲ್ಲಿ ಆಯೋಜಿಸಲಾಗಿತ್ತು. ಶಿಬಿರವನ್ನು ಸಾಮಾಜಿಕ ಕಾರ್ಯಕರ್ತ ಎಸ್.ಎನ್.ಹೆಗಡೆ ಉದ್ಘಾಟಿಸಿದ್ದರು. ಉತ್ತರ ಕನ್ನಡ ಜಿಲ್ಲಾ ಎನ್.ಎಸ್.ಎಸ್. ನೋಡಲ್ ಅಧಿಕಾರಿಯಾಗಿರುವ ಪ್ರೊ. ಜಿ.ಟಿ.ಭಟ್ಟ ಇವರು ಪ್ರಾಸ್ತಾವಿಕ ಮಾತನಾಡಿ ರಾಷ್ಟ್ರ ನಿರ್ಮಾಣದಲ್ಲಿ ಯುವಜನತೆ ತಮ್ಮನ್ನು ಹೇಗೆ ತೊಡಗಿಸಿಕೊಳ್ಳಬೇಕೆಂದು ತಮ್ಮ ಅನುಭವವನ್ನು ಹಂಚಿಕೊಂಡರು. ಮೈದೂರು ಮೈಲಾರೆಪ್ಪ ಶಿಬಿರಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಪ್ರಾಚಾರ್ಯರಾದ ಡಾ. ಎಸ್.ಕೆ.ಹೆಗಡೆಯವರು ತಮ್ಮ ಅಧ್ಯಕ್ಷೀಯ ಮಾತುಗಳಲ್ಲಿ ಎನ್.ಎಸ್.ಎಸ್. ಹೇಗೆ ವಿದ್ಯಾರ್ಥಿಗಳಲ್ಲಿ ಸಂಘಟನಾ ಶಕ್ತಿ ಸಹಕಾರ ಮನೋಬಾವ ಹಾಗೂ ಸಮಾಜ ಸೇವೆಯಂತ ಉನ್ನತ ಗುಣಗಳನ್ನು ಬೆಳೆಸಿ ಸದೃಡ ದೇಶಕ್ಕೆ ಯುವಶಕ್ತಿಯನ್ನು ನೀಡಬಲ್ಲರು ಎಂದು ವಿಶ್ಲೇಷಿಸಿದರು.ಒಟ್ಟಾರೆ ಎನ್.ಎಸ್.ಎಸ್. ಶಿಬಿರವು ಯಶಸ್ವಿಯಾಗಿ ಸಮಾರೋಪಗೊಂಡಿತು.
ಎಮ್.ಇ.ಎಸ್. ವಾಣಿಜ್ಯ ಮಹಾವಿದ್ಯಾಲಯದ ಎನ್.ಎಸ್.ಎಸ್. ಶಿಬಿರ ಸಂಪನ್ನ
