ಶಿರಸಿ; ತೋಟಗಾರಿಕಾ ಇಲಾಖೆ, ಶಿರಸಿ,ಕರ್ನಾಟಕ ಸಾಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿ, ಹುಬ್ಬಳ್ಳಿ,ತೋಟಗಾರಿಕಾ ಮಹಾವಿದ್ಯಾಲಯ, ಶಿರಸಿ, CLAPS ರೈತ ಉತ್ಪಾದಕ ಕಂಪನಿ, ಯಡಳ್ಳಿ ಇವರ ಸಂಯುಕ್ತಾಶ್ರಯದಲ್ಲಿ ಜೂ.29 ಬುಧವಾರ,ಬೆಳಿಗ್ಗೆ 10.30ಕ್ಕೆ ಶಿರಸಿಯ ಎ.ಪಿ.ಎಮ್.ಸಿ, ಯಾರ್ಡ್, ಟಿ.ಆರ್.ಸಿ. ಸಭಾಭವನದಲ್ಲಿ ‘ಸಾಂಬಾರು ಬೆಳೆಗಳ ಬೇಸಾಯ ತಂತ್ರಜ್ಞಾನ, ಸಂಸ್ಕರಣೆ ಹಾಗೂ ಮಾರುಕಟ್ಟೆ’ ಕುರಿತು ‘ವಿಚಾರ ಸಂಕಿರಣ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ಉದ್ಘಾಟಕರಾಗಿ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಆಗಮಿಸಲಿದ್ದು, ಎಪಿಎಂಸಿ ಅಧ್ಯಕ್ಷ ಪ್ರಶಾಂತ್ ಗೌಡರ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕರ್ನಾಟಕ ಸಾಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿ, ಹುಬ್ಬಳ್ಳಿ ಅಧ್ಯಕ್ಷ ಎ. ಎಸ್. ಜಯರಾಮ,ತೋಟಗಾರಿಕೆ ಉಪನಿರ್ದೇಶಕ ಡಾ. ಬಿ. ಪಿ. ಸತೀಶ್,ಕರ್ನಾಟಕ ಸಾಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿ, ಹುಬ್ಬಳ್ಳಿ ವ್ಯವಸ್ಥಾಪಕ ನಿರ್ದೇಶಕ, ಚಿದಾನಂದ ಪಿ. ಜಿ.,CLAPS ರೈತ ಉತ್ಪಾದಕ ಕಂಪನಿ, ಅಧ್ಯಕ್ಷ ಜಿ. ಆರ್. ಹೆಗಡೆ, ಬೆಳ್ಳೇಕೇರಿ,ಡೀನ್ ಆಫ್ ತೋಟಗಾರಿಕಾ ಮಹಾವಿದ್ಯಾಲಯ,ಡಾ. ಎಮ್. ಎಚ್. ತಟಗಾರ,ಪ್ರಗತಿಪರ ಕೃಷಿಕ ಆರ್. ಎಂ. ಹೆಗಡೆ, ಸಾಲ್ಕಣಿ ಆಗಮಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ತಜ್ಞರಿಂದ ‘ಸಾಂಬಾರು ಬೆಳೆಗಳ ವೈಜ್ಞಾನಿಕ ಬೇಸಾಯ ಕ್ರಮಗಳು’, ‘ಸಾಂಬಾರು ಬೆಳೆಗಳ ರೋಗ ನಿರ್ವಹಣೆ’,’ಸಾಂಬಾರು ಬೆಳೆಗಳಲ್ಲಿ ಕೀಟ ನಿಯಂತ್ರಣ’,’ಸಾವಯವ ತೋಟಗಾರಿಕೆ ಮತ್ತು ಕಾಂಪೋಸ್ಟ್ ತಯಾರಿಕೆ’,’ಸಾಂಬಾರು ಬೆಳೆಗಳ ಸಂಸ್ಕರಣೆ ಯೋಜನೆಗಳು’, ‘ಸಾಂಬಾರು ಬೆಳೆಗಳ ಮಾರುಕಟ್ಟೆ’ ವಿಷಯಗಳ ಮೇಲೆ ಉಪನ್ಯಾಸ ಕಾರ್ಯಕ್ರಮವಿರುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಆಸಕ್ತರು ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.