• Slide
    Slide
    Slide
    previous arrow
    next arrow
  • ಜನಸ್ನೇಹಿ ಕಾರ್ಯ ಕೈಗೊಂಡ ಪೊಲೀಸ್ ರಾಘವೇಂದ್ರ ನಾಯ್ಕ್:ಉಚಿತ ನೋಟ್‌ಬುಕ್,ಪೆನ್‌ ವಿತರಣೆ

    300x250 AD

    ಸಿದ್ದಾಪುರ: ಪೊಲೀಸ್ ಇಲಾಖೆ ಸಾರ್ವಜನಿಕರಿಗೆ ಹತ್ತಿರವಾಗಬೇಕೆಂದು ಹಲವು ಯೋಜನೆಗಳನ್ನು ಜಾರಿಗೆ ತಂದಿವೆ. ಇಲಾಖೆಯ ಜನರ ಬಳಿಗೆ ಹೋಗಿ ಜನಸಂಪರ್ಕ ಸಭೆಗಳನ್ನು ನಡೆಸುತ್ತಿವೆ. ಜನಸ್ನೇಹಿ ಬೀಟ್ ರಚನೆ ಮಾಡಿವೆ. ಆದರೂ ಪೊಲೀಸ್ ಎಂದರೆ ಸಾರ್ವಜನಿಕ ವಲಯದಲ್ಲಿ ಬೇರೆ ತರಹದ ಅಭಿಪ್ರಾಯಗಳಿವೆ. ಇವುಗಳಿಗೆ ಅಪವಾದ ಎನ್ನುವಂತೆ ತನ್ನ ಜನಪರವಾದ ಕಾಳಜಿಯ ಮೂಲಕ ಸಮಾಜಕ್ಕೆ ಮಾದರಿಯಾದ ನಿಜ ಅರ್ಥದಲ್ಲಿ ಜನಸ್ನೇಹಿ ಪೊಲೀಸ್ ರಾಘವೇಂದ್ರ ಡಿ.ನಾಯ್ಕ ಎನ್ನಬಹುದಾಗಿದೆ.

    ಸ್ಥಳೀಯ ಠಾಣೆಯ ಬೀಟ್-19 ಹವಾಲದ್ದಾರ ರಾಘವೇಂದ್ರ ಡಿ.ನಾಯ್ಕ ತಾನು ಕರ್ತವ್ಯ ನಿರ್ವಹಿಸುವ ಪ್ರದೇಶದಲ್ಲಿ ಜನಸ್ನೇಹಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಈ ಹಿಂದೆ ಇದ್ದ ಮನ್ಮನೆ ಬೀಟ್ ವ್ಯಾಪ್ತಿಯಲ್ಲಿ ಕೋವಿಡ್ ಸಮಯದಲ್ಲಿ ಹಲವರಿಗೆ ನೆರವಾಗಿದ್ದಾರೆ. ಅನೇಕರಿಗೆ ಆಹಾರದ ಕಿಟ್ ವಿತರಿಸಿ ಮಾದರಿಯಾಗಿದ್ದರು. ಅಲ್ಲದೆ ತನ್ನ ಗೆಳೆಯರ ಸಹಕಾರದಲ್ಲಿ ಆ ವ್ಯಾಪ್ತಿಯ ಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್‌ಬುಕ್ ಮತ್ತು ಪೆನ್‌ಗಳ ವಿತರಿಸಿ ಜನತೆಯ ಪ್ರೀತಿಗೆ ಪಾತ್ರರಾಗಿದ್ದರು. ಈಗ ಬೀಟ್-19 ರ ದೊಡ್ಮನೆ ಗ್ರಾಮ ಪಂಚಾಯತ ವ್ಯಾಪ್ತಿಯ 9 ಶಾಲೆಯ 400 ವಿದ್ಯಾರ್ಥಿಗಳಿಗೆ ನೋಟ್‌ಬುಕ್ ಮತ್ತು ಪೆನ್‌ಗಳನ್ನ ವಿತರಿಸಲಾಗಿದೆ.

    ತಾಲೂಕಿನ ದೊಡ್ಮನೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಧ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ಮತ್ತು ಪೆನ್‌ಗಳ ವಿತರಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಿಎಸ್‌ಐ ಎಂ.ಜಿ.ಕುಂಬಾರ, ಸ್ಥಳೀಯ ಗ್ರಾ.ಪಂ ಅಧ್ಯಕ್ಷ ಸುಬ್ರಾಯ ಭಟ್, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸತೀಶ ಹೆಗಡೆ, ತಾಲೂಕು ಪತ್ರಕರ್ತ ಸಂಘದ ಅಧ್ಯಕ್ಷ ಗಂಗಾಧರ ಕೊಳಗಿ, ಎಸ್‌ಡಿಎಂಸಿ ಅಧ್ಯಕ್ಷ ಕೃಷ್ಣಮೂರ್ತಿ ಭಟ್, ಸಿಆರ್‌ಪಿ ಭಾಸ್ಕರ, ಶಾಂತಕುಮಾರ ಭಟ್, ಪ.ಪಂ ನಾಮನಿರ್ದೇಶಿತ ಸದಸ್ಯರಾದ ಸುರೇಶ ನಾಯ್ಕ ಬಾಲಿಕೊಪ್ಪ, ಮಂಜುನಾಥ್ ಭಟ್, ಪ್ರೌಢಶಾಲಾ ಮುಖ್ಯ ಶಿಕ್ಷಕ, ಪಿಎಚ್‌ಸಿ ವೈದ್ಯಾಧಿಕಾರಿಗಳು, ಶಾಲಾ ಶಿಕ್ಷಕರು, ಸಿಬ್ಬಂದಿ, ಎಸ್‌ಡಿಎಂಸಿಯವರು, ಸ್ಥಳೀಯ ಗ್ರಾಮಸ್ಥರು ಉಪಸ್ಥಿತರಿದ್ದರು. ಶಾಲೆಯ ಮುಖ್ಯ ಶಿಕ್ಷಕ ಎಂ.ಐ.ಹೆಗಡೆ ಸ್ವಾಗತಿಸಿದರು. ಅತಿಥಿ ಶಿಕ್ಷಕಿ ಭಾಗೀರತಿ ನಾಯ್ಕ್ ನಿರೂಪಿಸಿದರು.

    ಕೋಟ್…

    300x250 AD

    ನಾವು ಗ್ರಾಮೀಣ ಭಾಗದಿಂದ ಬಂದವರಾಗಿದ್ದು, ಬಡ ಮತ್ತು ಮದ್ಯಮ ವರ್ಗದ ಮಕ್ಕಳ ನೋವು ನಮಗೆ ಅರಿವಿದೆ. ಸರಕಾರಿ ಶಾಲೆಗಳಿಗೆ ಬರುವ ಮಕ್ಕಳು ಅವರೆ ಆಗಿರುತ್ತಾರೆ. ನಾವು ಅವರಿಗೆ ಸಾಧ್ಯವಾದ ನೆರವನ್ನು ನೀಡಿ ಪ್ರೋತ್ಸಾಹಿಸಿದಾಗ ಮುಂದೆ ಆ ಮಕ್ಕಳು ಕಲಿತು ಒಳ್ಳೆಯ ಸ್ಥಿತಿಗೆ ತಲುಪಿದಾಗ ಇತರರಿಗೂ ಸಹಾಯ ಮಾಡುವುದಕ್ಕೆ ಸಾದ್ಯವಾಗುತ್ತದೆ ಎನ್ನುವ ಕಾರಣಕ್ಕೆ ಈ ಪ್ರಯತ್ನ. ಸರಕಾರಿ ಶಾಲೆಗಳನ್ನು ಬಲಗೊಳಿಸಬೇಕಾಗಿದೆ. ಅದಕ್ಕೆ ಸಮಾಜದ ಸಹಕಾರ ಅಗತ್ಯ.–· ರಾಘವೇಂದ್ರ ಡಿ.ನಾಯ್ಕ, ಬೀಟ್ ಪೊಲೀಸ್

    ಪೋಲಿಸರೆಂದರೆ ಭಯ ಅಲ್ಲ, ಭರವಸೆ. ನೊಂದವರಿಗೆ ಸಹಕಾರ ನೀಡುವುದೇ ಪೊಲೀಸರ ಕೆಲಸ. ಜನರು ತೊಂದರೆಗೆ ಒಳಗಾದಾಗ, ಅನ್ಯಾಯಕ್ಕೆ ಒಳಗಾದಾಗ, ರಸ್ತೆ ಅಪಘಾತಕ್ಕೆ ಈಡಾದಾಗ, ಹೊಡೆದಾಟ, ಗಲಾಟೆಗಳಾದಾಗ ಹೀಗೆ ಜನರು ಕಷ್ಟದಲ್ಲಿ ಇರುವಾಗ ಸಹಾಯಕ್ಕೆ ಬರುವ ಇಲಾಖೆ ಪೊಲೀಸ್ ಇಲಾಖೆಯಾಗಿದೆ. ಇಂದು ಮಾದರಿ ಕಾರ್ಯಗಳನ್ನು ಇಲಾಖೆಯಲ್ಲಿ ಇರುವವರು ಮಾಡುತ್ತ ಬಂದಿದ್ದಾರೆ.– ಎಂ.ಜಿ.ಕುಂಬಾರ, ಪಿಎಸೈ

    Share This
    300x250 AD
    300x250 AD
    300x250 AD
    Leaderboard Ad
    Back to top