ಶಿರಸಿ: ತಾಲ್ಲೂಕಿನ ಹೆಬ್ಬತ್ತಿ ಗ್ರಾಮದ ಕಲ್ಮೇಶ್ವರ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಟ್ರಸ್ಟ್ ವತಿಯಿಂದ ₹2 ಲಕ್ಷ ದೇಣಿಗೆ ನೀಡಲಾಯಿತು.
ದೇವಸ್ಥಾನದ ಆವರಣದಲ್ಲಿ ಇತ್ತೀಚಿಗೆ ದೇಣಿಗೆ ಮೊತ್ತದ ಚೆಕ್ ಅನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ಯೋಜನಾಧಿಕಾರಿ ಎ.ಬಾಬು ನಾಯ್ಕ ಅವರು ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಮಲ್ಲಸರ್ಜ ಪಾಟೀಲ್ ಅವರಿಗೆ ಹಸ್ತಾಂತರಿಸಿದರು.
ತಾಲ್ಲಾಕಾ ಯೋಜನಾಧಿಕಾರಿ ರಾಘವೇಂದ್ರ ನಾಯ್ಕ, ರಾಘವೇಂದ್ರ ಭಟ್, ದೇವಸ್ಥಾನದ ಉಪಾಧ್ಯಕ್ಷ ರಾಮಪ್ಪ ನಾಯ್ಕ, ಅಂಡಗಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಸಿದ್ದನ ಗೌಡ್ರ, ಗ್ರಾಮಸ್ಥರು ಇದ್ದರು.