ಶಿರಸಿ: ಯುವ ಸಬಲೀಕರಣ ವತಿಯಿಂದ ತಾಲೂಕಿನ ಬಚಗಾಂವ್ ಸಮೀಪ ಮರದ ಮಾರುತಿಯಲ್ಲಿ ವಿದ್ಯಾರ್ಥಿಗಳಿಗಾಗಿ ಕೆಸರುಗದ್ದೆ ಓಟದ ತರಬೇತಿಯನ್ನು ಹಮ್ಮಿಕೊಳ್ಳಲಾಗಿತ್ತು. ತರಬೇತಿಯಲ್ಲಿ ೨೩ ವಿದ್ಯಾರ್ಥಿಗಳು ಭಾಗವಹಿಸಿದ್ದು,ಮುಂಬರುವ ಕ್ರೀಡಾ ಸ್ಪರ್ಧೆಯನ್ನು ಎದುರಿಸಲು ವಿದ್ಯಾರ್ಥಿಗಳ ದೈಹಿಕ ಕ್ಷಮತೆ,ದಕ್ಷತೆ, ಮಾನಸಿಕ ಸ್ಥಿರತೆಯ ಮಟ್ಟ ತಿಳಿದು ಅದನ್ನು ಇನ್ನೂ ಹೆಚ್ಚಿಸುವ ಉದ್ದೇಶದಿಂದ ತರಬೇತಿಯನ್ನು ಆಯೋಜಿಸಲಾಗಿತ್ತು.ಸ್ಥಳೀಯ ಮಹಾಬಲೇಶ್ವರ್ ಬಂಡೆರ್ ಅವರ ಜಮೀನಿನಲ್ಲಿ ನಡೆಸಿದ ತರಬೇತಿಯು ಕಿರಣ್ ನಾಯ್ಕ್, ಚಂದ್ರು ಅವರ ಸಹಕಾರದಲ್ಲಿ ಯಶಸ್ವಿಯಾಗಿ ನಡೆಯಿತು. ಅಥ್ಲೆಟಿಕ್ ತರಬೇತುದಾರ ಅಣ್ಣಪ್ಪ ನಾಯ್ಕ್ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು.
ವಿದ್ಯಾರ್ಥಿಗಳ ಕ್ಷಮತೆ ಹೆಚ್ಚಿಸಲು ಕೆಸರುಗದ್ದೆ ಓಟ ತರಬೇತಿ
