ಶಿರಸಿ: 2022-27ರ ವರೆಗಿನ ಅವಧಿಗಾಗಿ ಶಿರಸಿ ತಾಲೂಕಾ ಭಾರತ ಸೇವಾದಳ ಕಾರ್ಯಕಾರಿಣಿ ಸಮಿತಿಯ ಅಧ್ಯಕ್ಷರಾಗಿ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರಾದ ಅಶೋಕ ಬಿ. ಭಜಂತ್ರಿ ಅವಿರೋಧವಾಗಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಶ್ರೀಮತಿ ವೀಣಾ ವಿಜಯಕುಮಾರ ಭಟ್ಟ, ಸುಪ್ರಸನ್ನ ನಗರ, ಕಾರ್ಯದರ್ಶಿಯಾಗಿ ಗುರುರಾಜ ಗಜಾನನ ಹೆಗಡೆ ನಿಲೇಕಣಿ, ಕೋಶಾಧ್ಯಕ್ಷರಾಗಿ ನಿವೃತ್ತ ಶಿಕ್ಷಕರಾದ ಕುಮಾರ ಎಸ್. ನಾಯ್ಕ ಭಾಸ್ಕರ ಕಾಲೋನಿ, ಸದಸ್ಯರಾಗಿ ಸುಬ್ರಾಯ ರಾಮಕೃಷ್ಣ ಹೆಗಡೆ ಹಲ್ಸನಳ್ಳಿ (ಊರತೋಟ) ಹಾಗೂ ಸತೀಶ ವೆಂಕಟ್ರಮಣ ಹೆಗಡೆ ಅಳ್ಳಿಹದ್ದ, ಮತ್ತ ಕೆ.ಎನ್. ನಾಯ್ಕ ಗಾಂಧಿನಗರ ಹಾಗೂ ಶಿಕ್ಷಕರ ಕ್ಷೇತ್ರದಿಂದ ಸಹಕಾರ್ಯದರ್ಶಿಯಾಗಿ ಬಿಸ್ಲಕೊಪ್ಪ ದೈಹಿಕ ಶಿಕ್ಷಕರ ಎಂ.ಎನ್.ಹೆಗಡೆ ಮತ್ತು ಮಹಿಳಾ ಸದಸ್ಯರಾಗಿ ರಾಯಪ್ಪ ಹುಲ್ಲೇಕಲ್ ಶಾಲೆ ಶಿರಸಿಯ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಪುಲ್ಲಾರ ಡಿಸೋಜಾ ಆಯ್ಕೆಗೊಂಡರು. ಚುನಾವಣಾ ಅಧಿಕಾರಿಗಳಾದ ಭಾರತ ಸೇವಾದಳ ಜಿಲ್ಲಾ ಸಂಘಟಕರಾದ ರಾಮಚಂದ್ರ ಹೆಗಡೆ ಇವರ ಸಲಹೆ ಸೂಚನೆಯಂತೆ ಆಯ್ಕೆಮಾಡಲಾಯಿತು. ಆಯ್ಕೆಗೊಂಡ ಕಾರ್ಯಕಾರಿಣಿ ಸಮಿತಿಯನ್ನು ಅಭಿನಂದಿಸಲಾಯಿತು.
ಭಾರತ ಸೇವಾದಳ ನೂತನ ಕಾರ್ಯಕಾರಿಣಿ ಸಮಿತಿ ರಚನೆ
