ಕಾರವಾರ: ಮಾಜಿ ಶಾಸಕ ಹಾಗೂ ಅಧ್ಯಕ್ಷರು ಗಿರಿಜಾ ಬಾಯಿ ಮೆಮೋರಿಯಲ್ ಎಜುಕೇಷನ್ ಟ್ರಸ್ಟ್ ಹಾಗೂ ಇಂಡಿಯಾನಾ ಹಾಸ್ಪಿಟಲ್ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಉಚಿತ ವೈದ್ಯಕೀಯ ಶಿಬಿರ ಹಾಗೂ ಕೋವಿಡ್ ಬೂಸ್ಟರ್ ಲಸಿಕೆ ನೀಡುವ ಕಾರ್ಯಕ್ರಮ ಸಂಪೂರ್ಣ ಯಶಸ್ವಿಯಾಗಿ ಜರುಗಿತು.
ವೈದ್ಯಕೀಯ ಶಿಬಿರದಲ್ಲಿ ನೂರು ಜನರು ಕ್ಯಾನ್ಸರ್ ತಪಾಸಣೆ ಮತ್ತು ಸ್ತ್ರೀ ರೋಗ ತಪಾಸಣೆ ಮಾಡಿಸಿಕೊಂಡರೆ ಸುಮಾರು ನೂರಕ್ಕೂ ಹೆಚ್ಚು ಮಂದಿ ಕೋವಿಡ್ಸ್ ಬೂಸ್ಟರ್ ಪ್ರಯೋಜನ ಪಡೆದುಕೊಂಡರು.
ಕಾರ್ಯಕ್ರಮದ ಉದ್ಘಾಟನೆಯನ್ನು ಸುಪ್ರೀಮ್ ಕೋರ್ಟ್ ಹಿರಿಯ ನ್ಯಾಯವಾದಿ ದೇವದತ್ತ ಕಾಮತ್ ಪರವಾಗಿ ಹಿಂದು ಹೈಸ್ಕೂಲ್ ಮುಖ್ಯೋಧ್ಯಾಪಕ ಅರುಣ್ ರಾಣೆ ದೀಪ ಬೆಳಗಿಸಿ ಉದ್ಘಾಟಿಸಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಹಿರಿಯ ಪತ್ರಕರ್ತ ಗಂಗಾಧರ ಹಿರೆಗುತ್ತಿ ಮಾತನಾಡುತ್ತಾ ಸತೀಶ್ ಸೈಲವರು ಜನರ ಆರೋಗ್ಯದ ವಿಷಯದಲ್ಲಿ ಹೆಚ್ಚಿನ ಕಾಳಜಿ ವಸುತಿರುವುದು ಪ್ರಶಂಸನೀಯ ಎಂದರು. ಮುಂದುವರಿದು ಕಾರವಾರದಲ್ಲಿ ಸೂಪರ್ಸ್ಟೆಷಾಲಿಟಿ ಆಸ್ಪತ್ರೆಯ ಅಗತ್ಯತೆಯನ್ನು ಒತ್ತಿ ಹೇಳಿ ಜನರು ಆರೋಗ್ಯದ ವಿಷಯದಲ್ಲಿ ಹೆಚ್ಚಿನ ಕಾಳಜಿ ವಹಿಸುವುದು ಅತ್ಯಗತ್ಯ ಎಂದು ಹೇಳಿದರು. ಜನರು ಕ್ರಿಯಾಶೀಲರಾಗಿರಬೇಕಾದರೆ ಪ್ರತಿಯೊಬ್ಬರಿಗೂ ವಾಯುವಿಹಾರ ಮಾಡುವುದು ಅತ್ಯಗತ್ಯ ಎಂದು ಕಿವಿಮಾತು ಹೇಳಿದರು.
ಖ್ಯಾತ ಕ್ಯಾನ್ಸರ್ ವೈದ್ಯ ಡಾ. ಅಜಯ ಕುಮಾರ್ ಮಾತನಾಡುತ್ತಾ ಕ್ಯಾನ್ಸರ್ ರೋಗ ಗುಣಪಡಿಸಲಾಗುವ ಹಾಗೂ ತಡೆಗಟ್ಟುವ ರೋಗವಾಗಿದ್ದು, ಜನರು ಭಯಬೀತರಾಗುವ ಅವಶ್ಯಕತೆ ಇಲ್ಲ ಎಂದು ಜನರಲ್ಲಿ ಧೈರ್ಯ ತುಂಬಿದರು. ಪ್ರಾರಂಭದಲ್ಲಿಯೇ ಜನರು ಭಯ ಬಿಟ್ಟು ಮುಂದೆ ಬಂದು ತಪಾಸಣೆ ನಡೆಸಿಕೊಂಡರೆ ಯಾವುದೇ ಭಯ ಇಲ್ಲದೆ ಕ್ಯಾನ್ಸರ್ ರೋಗವನ್ನು ಹಿಮ್ಮೆಟ್ಟಿಸಬಹುದೆಂದರು, ಕಾರ್ಯಕ್ರಮದ ಮುಖ್ಯ ರೂವಾರಿಯಾಗಿದ್ದ ಮಾಜಿ ಶಾಸಕ ಸತೀಶ್ ಸೈಲ್ ಮಾತನಾಡುತ್ತಾ ಈ ಹಿಂದೆ ಕೂಡಾ ಕೇಂದ್ರ ಸರಕಾರ ಜನರಿಗೆ ಉಚಿತ ಲಸಿಕೆ ಕೊಡಲು ಹಿಂಜರಿದಾಗ ತಾನು ನೇತೃತ್ವ ವಹಿಸಿ ಉಚಿತವಾಗಿ ಲಸಿಕೆ ನೀಡಿದ್ದು, ಈಗ ಕೂಡಾ ಅರವತ್ತು ವರ್ಷದ ಕೆಳಗಿನವರೆಗೆ ಸರಕಾರ ಉಚಿತ ಲಸಿಕೆ ನೀಡಲು ಹಿಂದೆ ಮುಂದೆ ನೋಡುತ್ತಿದ್ದಾಗ ಜನರ ಒತ್ತಾಯದ ಮೇರೆಗೆ ತಾನು ಮುಂದೆ ನಿಂತು ಉಚಿತ ಬೂಸ್ಟರ್ ವ್ಯವಸ್ಥೆ ಮಾಡಿದ್ದೇನೆ. ಅದೇ ರೀತಿ ಕ್ಯಾನ್ಸರ್ ಮಾರಕ ರೋಗವಾಗಿದ್ದು ಅದನ್ನು ಪ್ರಾರಂಭದಲ್ಲಿಯೇ ಪತ್ತೆ ಹಚ್ಚಲು ಈ ವೈದ್ಯಕೀಯ ಶಿಬಿರ ಏರ್ಪಡಿಸಲಾಗಿದೆ ಎಂದರು. ಎರಡೂ ದಿವಸದ ಕಾರ್ಯಕ್ರಮದ ಸಂಪೂರ್ಣ ಪ್ರಯೋಜನವನ್ನು ಸ್ಥಳೀಯರು ಪಡೆಯಬೇಕಾಗಿದೆ ಎಂದರು. ಮುಖ್ಯ ಅತಿಥಿಗಳಾಗಿದ್ದ ಸಮಾಜ ಸೇವಕರಾದ ಸ್ಯಾಟ್ಸನ್ ಡಿಸೋಜ, ಮೋಹನ್ ಕಿಂದಲ್ಕರ್ ಮತ್ತು ವಿದ್ಯಾರ್ಥಿ ನಾಯಕಿ ರಶ್ಮಿ ನಾಯ್ಡ್ ಶುಭ ಹಾರೈಸಿ ದರು. ಇಂಡಿಯಾನಾ ಆಸ್ಪತ್ರೆ ಪಬ್ಲಿಕ್ ರಿಲೇಶನ್ ಆಫೀಸರ್ ಶಕೀರ್ ಮಾತನಾಡುತ್ತಾ ತಮ್ಮ ಆಸ್ಪತ್ರೆಯು ಕೋಗೋಣ ಸಮಯದಲ್ಲಿ ಸತೀಶ್ ಸೈಲ್ ರವರರೊಡನೆ ಕಾರವಾರದ ಜನತೆಗೆ ಪೂರ್ಣ ಸಹಕಾರ ನೀಡಿದ್ದು, ಮುಂದೆಯೂ ನಮ್ಮಆಸ್ಪತ್ರೆ ಕಾರವಾರ ಜನತೆಗೆ ಸೇವೆ ಸಲ್ಲಿಸುವುದರ ಮುಂಚೂಣಿಯಲ್ಲಿ ಕೆಲಸ ಮಾಡುವುದಾಗಿ ತಿಳಿಸಿದರು. ಮತ್ತೋರ್ವ ಖ್ಯಾತ ಸ್ತ್ರೀ ರೋಗ ತಜ್ಞೆ ಭಾವನಾ ಸೇರಿಗಾರ ಸಂದರ್ಭೋಚಿತವಾಗಿ ಮಾತನಾಡಿದರು.ಕೆ ಶಂಭು ಶೆಟ್ಟಿ ಕಾರ್ಯಕ್ರಮ ನಿರೂಪಿಸಿ,ವಂದಿಸಿದರು.