ಶಿರಸಿ: ಇಸಳೂರು ಗ್ರಾಮ ಪಂಚಾಯತ ವ್ಯಾಪ್ತಿಯ ಸರಕಾರಿ ಪ್ರೌಢಶಾಲೆ ಇಸಳೂರಿನಲ್ಲಿ ಯುತ್‌ಫಾರ್ ಸೇವಾ ಸಂಸ್ಥೆಯು ಟೇಕ್ಸಾಸ್ ಇನ್ಸ್ಟ್ರುಮೆಂಟ್ಸ್ ಕಂಪನಿಯ ಸಹಯೋಗದೊಂದಿಗೆ ಗ್ರಾಮೀಣ ಭಾಗದ ಸರಕಾರಿ ಶಾಲೆಯ ಮೂಲಭೂತ ಸೌಕರ್ಯ ಕೊರತೆ ಪರಿಗಣಿಸಿ ಸುಮಾರು 6.5 ಲಕ್ಷ ರೂಪಾಯಿ ವ್ಯಯಿಸಿ ನಿರ್ಮಿಸಿದ ಹೈಟೆಕ್ ಶೌಚಾಲಯವನ್ನು ಲೋಕಾರ್ಪಣೆ ಗೊಳಿಸಲಾಯಿತು.
ಉದ್ಘಾಟನಾ ಸಮಾರಂಭದಲ್ಲಿ ಯುತ್‌ಫಾರ್ ಸೇವಾ ಸಂಸ್ಥೆಯ ಪ್ರಾಜೆಕ್ಟ ಹೆಡ್ ಭಾಸ್ಕರ ಕೇಶವಮೂರ್ತಿ, ರವಿಶಂಕರ ಹೆಗಡೆ, ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ ಕಂಪನಿಯ ಗಣೇಶ, ಹೇಮಂತ ಶೈಕ್ಷಣಿಕ ಜಿಲ್ಲಾ ಉಪನಿರ್ದೇಶಕರಾದ ಬಿ. ಬಸವರಾಜ, ಪಂಚಾಯತ ಉಪಾಧ್ಯಕ್ಷರಾದ ಪ್ರಸನ್ನ ಹೆಗಡೆ, ಆರ್.ವಿ.ಹೆಗಡೆ, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.
ಕಂಪನಿಯ ಮುಖ್ಯಸ್ಥರು ಮಾತನಾಡಿ ಇಷ್ಟೊಂದು ಪ್ರಮಾಣದ ಬಂಡವಾಳ ಹೂಡಿಕೆ, ಸಮುದಾಯದ ಅಭಿವೃದ್ಧಿ, ಶೈಕ್ಷಣಿಕ ಗುಣಮಟ್ಟ ಮತ್ತು ವ್ಯವಸ್ಥೆಯ ಸುಧಾರಣೆ ಮತ್ತು ಮುಂದಿನ ಭಾವಿ ನಾಗರಿಕರಿಗೆ ವ್ಯವಸ್ಥಿತ ವ್ಯವಸ್ಥೆ ಕಲ್ಪಿಸುವ ಉದ್ದೇಶ ಹೊಂದಿದ್ದು, ವ್ಯವಸ್ಥೆಯ ಸದುಪಯೋಗ ಮತ್ತು ಸ್ವಚ್ಛತೆಯನ್ನು ನಿರ್ವಹಿಸಿ ವ್ಯವಸ್ಥೆಯ ಸುಧಾರಣೆಗೆ ಕೈ ಜೋಡಿಸಲು ಶ್ರಮಿಸೋಣ ಎಂದರು. ಸಂಸ್ಥೆ, ಕಂಪನಿ, ಮತ್ತು ಕಾರ್ಯಕ್ರಮಾಧಿಕಾರಿ ಉಮಾಪತಿ ಭಟ್ಟರಿಗೆ, ಸಿ.ವಿ. ಹೆಗಡೆ ಗುತ್ತಿಗೆದಾರರಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.
ಮುಖ್ಯಾಧ್ಯಾಪಕರಾದ ಶ್ರೀಮತಿ ಸುಮಂಗಲಾ ಜೋಶಿ ಪ್ರಸ್ತಾವಿಕ ಮಾತನಾಡಿದರು. ಕುಮಾರಿ ಸ್ವಾತಿ ನಾಯ್ಕ ಪ್ರಾರ್ಥನಾ ಗೀತೆ, ಶ್ರೀಮತಿ ಸುನೀತಾ ಹೆಗಡೆ ವಂದಿಸಿದರು. ಸಹಶಿಕ್ಷಕ ದಿವಾಕರ ಮರಾಠೆ ಕಾರ್ಯಕ್ರಮ ನಿರ್ವಹಿಸಿದರು.
ಸರಕಾರಿ ಪ್ರೌಢಶಾಲೆಯಲ್ಲಿ ಹೈಟೆಕ್ ಶೌಚಾಲಯ ಲೋಕಾರ್ಪಣೆ
