ಶಿರಸಿ: ತಾಲೂಕಿನ ಇಸಳೂರಿನ ಸರಕಾರಿ ಪ್ರೌಢ ಶಾಲೆಯ ಮಕ್ಕಳು 2021-22 ನೇ ಸಾಲಿನ ರಾಷ್ಟ್ರೀಯ ಶಿಷ್ಯ ವೇತನ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿ 6 ವಿದ್ಯಾರ್ಥಿಗಳು ಶಿಷ್ಯವೇತನಕ್ಕೆ ಭಾಜನರಾಗಿದ್ದಾರೆ.ಸೀಮಾ ಹೆಗಡೆ,ತೇಜಸ್ವಿ ಗೌಡ,ಲಾವಣ್ಯ ಪಾಟೀಲ,ಸಂದೇಶ ಎಸ್. ಪಾಟೀಲ್,ಚಂದ್ರಕಲಾ ಭೋವಿವಡ್ಡರ,ಲಕ್ಷ್ಮಿ ಸಾಕಣ್ಣನವರ ಶಿಷ್ಯವೇತನಕ್ಕೆ ಭಾಜನರಾಗಿದ್ದು ವಿದ್ಯಾರ್ಥಿಗಳ ಈ ಸಾಧನೆಗೆ ಶಾಲಾ ಆಡಳಿತ ಮಂಡಳಿ ಮುಖ್ಯಾಧ್ಯಾಪಕರು, ಶಿಕ್ಷಕವೃಂದ ಹರ್ಷವ್ಯಕ್ತಪಡಿಸಿ ಮಾರ್ಗದರ್ಶನ ನೀಡಿದ ಶಿಕ್ಷಕರಿಗೂ ಅಭಿನಂದನೆ ಸಲ್ಲಿಸಿರುತ್ತಾರೆ.
ಇಸಳೂರು ಪ್ರೌಢಶಾಲೆಯ ಮಕ್ಕಳು ರಾಷ್ಟ್ರೀಯ ಶಿಷ್ಯ ವೇತನಕ್ಕೆ ಆಯ್ಕೆ
