ಶಿರಸಿ: ಇಸಳೂರಿನಲ್ಲಿ ಶ್ರೀ ರಾಜರಾಜೇಶ್ವರೀ ವಿದ್ಯಾ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಶ್ರೀನಿಕೇತನ ಶಾಲೆಯಲ್ಲಿ ವಿಶ್ವ ಹಾಲಿನ ದಿನವನ್ನುಆಚರಿಸಲಾಯಿತು.ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀಮತಿ ವೇದಾ ಹೆಗಡೆ ನೀರ್ನಳ್ಳಿ ಅವರು ಮಾತನಾಡಿ ಪಶುಗಳಿಗೆ ಸಮತೋಲನ ಆಹಾರ ನೀಡುವುದರ ಮೂಲಕ ಉತ್ತಮ ಹಾಲನ್ನು ಪಡೆಯಬಹುದಾಗಿದೆ. ಅದರ ಜೊತೆಗೆ ಯಾವುದೇ ಕೆಲಸ ಮಾಡಲು ಶ್ರದ್ಧೆಇರಬೇಕು, ಶ್ರದ್ಧೆಯಿಂದ ಮಾಡಿದ ಕೆಲಸಕ್ಕೆ ಪ್ರತಿಫಲ ಕಟ್ಟಿಟ್ಟ ಬುತ್ತಿ ಎಂದು ಮಕ್ಕಳಿಗೆ ತಿಳಿ ಹೇಳಿದರು.
ನಂತರ ಹತ್ತನೇತರಗತಿಯ ವಿದ್ಯಾರ್ಥಿಗಳಾದ ಕುಮಾರ ಸುಶಾಂತ ಹೆಗಡೆ, ಕುಮಾರ ರಘುನಂದನ ಭಟ್, ಕುಮಾರ ಸುಜನ್ ಹೆಗಡೆ, ಕುಮಾರಿ ಅರ್ಚಿತಾಎಚ್.ಎಸ್. ಮತ್ತುಕುಮಾರಿ ಪ್ರಣತಿ ಹೆಗಡೆ ದೃಶ್ಯ ಮಾಧ್ಯಮದ ಮೂಲಕ ಹಾಲಿನ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಮೇಜರ್ ರಘುನಂದನ ಹೆಗಡೆ, ಶಾಲೆಯ ಪ್ರಾಚಾರ್ಯರಾದ ವಸಂತ್ ಭಟ್ ಮತ್ತು ಹಿರಿಯ ಶಿಕ್ಷಕಿಯಾದ ಶ್ರೀಮತಿ ಸೀತಾ ಜೋಶಿ ಉಪಸ್ಥಿತರಿದ್ದರು. ಹತ್ತನೇ ತರಗತಿಯ ವಿದ್ಯಾರ್ಥಿನಿಯರಾದ ಕುಮಾರಿ ಅವನಿ ಜಿ.ಎಸ್. ಸ್ವಾಗತಿಸಿ, ಕುಮಾರಿ ಅನನ್ಯಾ ಭಟ್ ನಿರ್ವಹಿಸಿ, ಕುಮಾರಿ ಖುಶಿ ರಾಚೋಟಿ ವಂದಿಸಿದರು. ಕಾರ್ಯಕ್ರಮದಲ್ಲಿ ಶಾಲೆಯ ಎಲ್ಲ ಶಿಕ್ಷಕ ಶಿಕ್ಷಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶ್ರೀನಿಕೇತನದಲ್ಲಿ ವಿಶ್ವ ಹಾಲಿನ ದಿನ ಆಚರಣೆ
