• first
  second
  third
  previous arrow
  next arrow
 • ಯುಜಿಡಿ ಕಾಮಗಾರಿಯಿಂದ ಹದಗೆಟ್ಟ ಲಿಂಕ್ ರಸ್ತೆ

  300x250 AD

  ದಾಂಡೇಲಿ: ನಗರದ ಪ್ರಮುಖ ವಾಣಿಜ್ಯ ರಸ್ತೆಯಾಗಿರುವ ಲಿಂಕ್ ರಸ್ತೆಯಂತೂ ಇದೀಗ ಯುಜಿಡಿ ಕಾಮಗಾರಿಯಿಂದ ತೀವ್ರ ಹದಗೆಟ್ಟಿದೆ. ಮಳೆಗಾಲದ ಸಮಯದಲ್ಲಿ ಈ ರೀತಿ ರಸ್ತೆ ಅಗೆದು ಕಾಮಗಾರಿ ನಡೆಸಬಾರದಿದ್ದರೂ, ಸರ್ವಾಧಿಕಾರಿ ಧೋರಣೆಯಂತೆ ಅವರು ಮಾಡಿದ್ದೇ ಸರಿ ಎಂಬಂತೆ ಕಾಮಗಾರಿ ನಡೆಸುತ್ತಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

  ನಗರದ ಪ್ರಮುಖ ವಾಣಿಜ್ಯ ರಸ್ತೆಯಾಗಿರುವ ಲಿಂಕ್ ರಸ್ತೆಯಲ್ಲಿ ಕಳೆದ ವರ್ಷವೆ ಯುಜಿಡಿ ಮುಖ್ಯ ಪೈಪ್ಲೈನಿಗಾಗಿ ರಸ್ತೆ ಅಗೆದು ಮುಚ್ಚಲಾಗಿತ್ತು. ಇದೀಗ ಮತ್ತೆ ಮುಖ್ಯ ಪೈಪ್ಲೈನಿಗೆ ಸಂಪರ್ಕ ಕ್ಲಲ್ಪಿಸುವ ಪೈಪ್ ಗಳ ಜೋಡಣೆಗೆ ರಸ್ತೆ ಅಗೆಯಲಾಗುತ್ತಿದೆ. ಅದು ಮಳೆಗಾಲದ ಸಮಯದಲ್ಲಿ ಅಸ್ತೆ ಅಗೆದು ಮುಚ್ಚಿರುವುದರಿಂದ ಅಲ್ಲಲ್ಲಿ ಹೊಂಡ ಗುಂಡಿಗಳು ನಿರ್ಮಾಣವಾಗಿ ವಾಹನ ಸಂಚಾರಕ್ಕೆ ದುಸ್ತರವಾಗಿದೆ. ಇನ್ನೂ ಗರ್ಭಿಣಿ ಮಹಿಳೆಯರು ಈ ರಸ್ತೆಯಲ್ಲಿ ಸಂಚರಿಸಿದರೇ ವಾಹನದಲ್ಲೆ ಹೆರಿಗೆಯಾಗುವುದರಲ್ಲಿ ಯಾವ ಅನುಮಾನವೂ ಇಲ್ಲ. ದೈನಂದಿನ ಜನಜೀವನಕ್ಕೆ ತೊಂದರೆಯಾಗುವ ರೀತಿಯಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳುತ್ತಿರುವ ಯುಜಿಡಿ ಗುತ್ತಿಗೆ ಸಂಸ್ಥೆಯವರಿಗೆ ಎಷ್ಟೇ ಹೇಳಿದರೂ ಕೇಳದಿರುವ ಹಿನ್ನಲೆಯಲ್ಲಿ ಯುಜಿಡಿ ಗುತ್ತಿಗೆ ಸಂಸ್ಥೆಯವರ ಮೇಲೆ ಕಾನೂನು ಸಮರಕ್ಕೆ ಕೆಲವರು ಮುಂದಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

  300x250 AD

  ಲಿಂಕ್ ರಸ್ತೆಯಲ್ಲಿ ಹದಗೆಡಿಸಿದ ರಸ್ತೆಯನ್ನು ಕೂಡಲೆ ದುರಸ್ತಿಗೊಳಿಸಬೇಕಾಗಿದ್ದು, ದುರಸ್ತಿಗೊಳಿಸದಿದ್ದಲ್ಲಿ ಯುಜಿಡಿ ಗುತ್ತಿಗೆ ಸಂಸ್ಥೆಯ ಕಚೇರಿಯ ಮುಂದೆ ಪ್ರತಿಭಟನೆಗೆ ಸಾರ್ವಜನಿಕರು ಅಣಿಯಾಗಿದ್ದು, ಅದರ ಮುನ್ನವೆ ಯುಜಿಡಿ ಗುತ್ತಿಗೆ ಸಂಸ್ಥೆ ಎಚ್ಚೆತ್ತು ದುರಸ್ತಿ ಕಾರ್ಯ ಮಾಡಬೇಕೆಂಬ ಆಗ್ರಹ ಕೇಳಿ ಬರುತ್ತಿದೆ.

  Share This
  300x250 AD
  300x250 AD
  300x250 AD
  Back to top