• first
  second
  third
  previous arrow
  next arrow
 • ಕೆಪಿಎಸ್‍ನಲ್ಲಿ ಎಲ್‍ಕೆಜಿ ಹೆಚ್ಚುವರಿ ತರಗತಿಗಳ ಉದ್ಘಾಟನೆ

  300x250 AD

  ಕುಮಟಾ: ಪಟ್ಟಣದ ನೆಲ್ಲಿಕೇರಿ ಕರ್ನಾಟಕ ಪಬ್ಲಿಕ್ ಸ್ಕೂಲ್‍ನಲ್ಲಿ ಎಲ್‍ಕೆಜಿ ಹೆಚ್ಚುವರಿ ತರಗತಿಗಳನ್ನು ಶಾಸಕ ದಿನಕರ ಶೆಟ್ಟಿ ಅವರು ಶನಿವಾರ ಉದ್ಘಾಟಿಸಿದರು. ಮಕ್ಕಳಿಗೆ ನೋಟ್ ಬುಕ್, ಪೆನ್‍ಗಳನ್ನು ವಿತರಿಸಿ ಸಿಹಿ ಹಂಚಿದರು.

  ಈ ಸಂದರ್ಭದಲ್ಲಿ ವಿಶೇಷ ಮಕ್ಕಳಿಗೆ ಹೈಟೆಕ್ ಶೌಚಾಲಯ ನಿರ್ಮಿಸಿದ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಂದ್ರ ಎಲ್. ಭಟ್ಟ ಅವರು ಗಮನಕ್ಕೆ ತಂದರು. ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಸಕರು, ಮಕ್ಕಳಿಗೆ ಸರ್ಕಾರಿ ಶಾಲೆಯಲ್ಲೂ ಉನ್ನತ ಶಿಕ್ಷಣ ಸಿಗಬೇಕು ಎನ್ನುವ ಕಾರಣದಿಂದ ಎಲ್.ಕೆ.ಜಿ. ವಿಭಾಗಕ್ಕೆ ಹೆಚ್ಚುವರಿ ತರಗತಿಗಳನ್ನು ಒದಗಿಸಲಾಗಿದೆ. ಬಿಜೆಪಿ ಸರ್ಕಾರವು ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಅಪಾರ ಒಲವನ್ನು ಹೊಂದಿದ್ದು ಅದು ಎಲ್ಲೆಡೆ ಸಾಕಾರಗೊಳ್ಳುತ್ತಿರುವ ಉದಾಹರಣೆ ನಮ್ಮ ಮುಂದಿದೆ ಎಂದು ಹೇಳಿದರು.

  300x250 AD

  ಡಿಡಿಪಿಐ ಈಶ್ವರ ನಾಯ್ಕ, ಕ್ಷೇತ್ರ ಸಮನ್ವಯಾಧಿಕಾರಿ ರೇಖಾ ನಾಯಕ, ಪ್ರಾಂಶುಪಾಲ ಸತೀಶ ನಾಯ್ಕ, ಪುರಸಭೆ ಅಧ್ಯಕ್ಷೆ ಅನುರಾಧ ಬಾಳೆರಿ ಮುಂತಾದವರು ಇದ್ದರು.

  Share This
  300x250 AD
  300x250 AD
  300x250 AD
  Back to top