• first
    second
    third
    previous arrow
    next arrow
  • ಉದ್ಯೋಗ ಖಾತರಿ ಯೋಜನೆಯಡಿ ಹುಣಸಿಕಟ್ಟಿ ಕೆರೆಗೆ ಮರುಜೀವ

    300x250 AD

    ಮುಂಡಗೋಡ: ತಾಲೂಕಿನ ಪಾಳಾ ಗ್ರಾಮ ಪಂಚಾಯತಿಯಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ನಡೆಯುತ್ತಿರುವ ಕೆರೆ ಪುನರ್ ನಿರ್ಮಾಣ ಕಾಮಗಾರಿ ಸ್ಥಳದಲ್ಲಿ ದುಡಿಯೋಣ ಬಾ ಅಭಿಯಾನ ಆಚರಿಸಲಾಯಿತು.

    ಸುಮಾರು 3 ಲಕ್ಷ ವೆಚ್ಚದಲ್ಲಿ ಹುಣಸಿಕಟ್ಟಿ ಕೆರೆ ಪುನರ್ ನಿರ್ಮಾಣ ಕೈಗೊಳ್ಳಲಾಗಿದೆ. ಕಳೆದ 15 ದಿನಗಳಿಂದ ಕೆಲಸ ನಡೆಯುತ್ತಿದ್ದು, 32 ಕೂಲಿಕಾರರು ಭಾಗಿಯಾಗಿದ್ದರು. ಮಹಿಳೆಯರೆ ಹೆಚ್ಚಿನ ಸಂಖ್ಯೆಯಲ್ಲಿದ್ದು, 60 ವರ್ಷ ಮೇಲ್ಪಟ್ಟ 4 ಕೂಲಿಕಾರರು ಕೆಲಸದಲ್ಲಿ ನಿರತರಾಗಿದ್ದಾರೆ.

    ಗ್ರಾಮ ಕಾಯಕ ಮಿತ್ರ ಭೀಮಣ್ಣ ಭೋವಿ ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನಿರ್ವಹಿಸುತ್ತಿದ್ದು ಯೋಜನೆಯಿಂದ ಗ್ರಾಮದಲ್ಲಿ ಅಭಿವೃದ್ಧಿ ಕಂಡಿದೆ. ಕೆರೆ, ಕಾಲುವೆ, ಇಂಗುಗುಂಡಿಗಳ ನಿರ್ಮಾಣದಿಂದಾಗಿ ನೀರಿನ ಮಟ್ಟದಲ್ಲಿ ಹೆಚ್ಚಳ ಕಂಡಿದ್ದು, ಬೋರ್‍ವೆಲ್‍ಗಳು ರೀಚಾರ್ಜ್ ಆಗಿವೆ. ಹತ್ತು ವರ್ಷಗಳ ಹಿಂದೆ ಕುಡಿಯಲು ನೀರಿಗೂ ಬರವಿತ್ತು. ಖಾತ್ರಿ ಯೋಜನೆಯಿಂದಾಗಿ ಸುತ್ತಲಿನ ರೈತರ ಹೊಲಗದ್ದೆಗಳಲ್ಲಿ ನೀರಿನ ಅನುಕೂಲತೆ ಕಲ್ಪಿಸಿದೆ. ಇದೀಗ ಇಲ್ಲಿನ ರೈತರು ಅಡಿಕೆ ಬೆಳೆಗಾರರಾಗಿದ್ದಾರೆ ಎಂದರು.

    300x250 AD

    ಕೂಲಿಕಾರರಿಗೆ ನೀಡಲಾಗುತ್ತಿದ್ದ 10 ರೂ. ಸಾಮಗ್ರಿ ವೆಚ್ಚವನ್ನು ಕಡಿತಗೊಳಿಸಿದ್ದು, ಮುಂದುವರೆಸಬೇಕು. ಜೊತೆಗೆ ಪ್ರತಿ ಕುಟುಂಬಕ್ಕೆ ನೀಡಲಾಗುವ ಮಾನವ ದಿನಗಳನ್ನು 100 ರಿಂದ 200ಕ್ಕೆ ಹೆಚ್ಚಿಸಬೇಕು ಮತ್ತು ಕೂಲಿಯಲ್ಲಿಯೂ ಹೆಚ್ಚಳವಾಗಬೇಕು ದುಡಿಯುವ ಕೈಗಳಿಗೆ ನೀಡುವಂತೆ ಅವರು ಸರ್ಕಾರಕ್ಕೆ ವಿನಂತಿಸಿದರು.

    ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಐಇಸಿ ಸಂಯೋಜಕಿ ಪೂರ್ಣಿಮಾ ಗೌಡ, ಬಿಎಫ್‍ಟಿ ಸಂತೋಷ ಹಿರೇಮಠ, ಗ್ರಾಮ ಕಾಯಕ ಮಿತ್ರರು ಇದ್ದರು.

    Share This
    300x250 AD
    300x250 AD
    300x250 AD
    Back to top