• first
  second
  third
  previous arrow
  next arrow
 • ಅಂಕೋಲಾ ಅರ್ಬನ್ ಬ್ಯಾಂಕ್ ಶತಮಾನೋತ್ಸವ ಹಿನ್ನೆಲೆ: ಕೇಂದ್ರದಿಂದ ಗೌರವಾರ್ಪಣೆ

  300x250 AD

  ಅಂಕೋಲಾ: ತಾಲೂಕಿನ ಪ್ರತಿಷ್ಠಿತ ಅಂಕೋಲಾ ಅರ್ಬನ್ ಬ್ಯಾಂಕ್ ಶತಮಾನ ಪೂರೈಸಿದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಬ್ಯಾಂಕಿನ ಆಡಳಿತ ಮಂಡಳಿಯನ್ನು ಸನ್ಮಾನಿಸಿ ಗೌರವಿಸಿದರು.

  ನವದೆಹಲಿಯ ರಾಷ್ಟ್ರೀಯ ಪಟ್ಟಣ ಸಹಕಾರ ಬ್ಯಾಂಕುಗಳ ಮಹಾಮಂಡಳದ ಆಶ್ರಯದಲ್ಲಿ ದೆಹಲಿಯ ವಿಜ್ಞಾನ ಭವನದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಸಮಾವೇಶದಲ್ಲಿ ಪಟ್ಟಣ ಸಹಕಾರಿ ಬ್ಯಾಂಕುಗಳಿಗೆ ಸನ್ಮಾನಿಸುವ ಕಾರ್ಯಕ್ರಮವನ್ನು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಉದ್ಘಾಟಿಸಿದರು.

  ಈ ಸಂದರ್ಭದಲ್ಲಿ 100 ವರ್ಷ ಪೂರೈಸಿದ ಪಟ್ಟಣ ಸಹಕಾರ ಬ್ಯಾಂಕುಗಳಿಗೆ ರಾಷ್ಟ್ರೀಯ ಪಟ್ಟಣ ಸಹಕಾರ ಬ್ಯಾಂಕುಗಳ ಮಹಾಮಂಡಳದ ವತಿಯಿಂದ ಗೌರವಾರ್ಪಣೆ ನಡೆಯಿತು. ಈ ಸಂದರ್ಭದಲ್ಲಿ 100 ವರ್ಷ ಪೂರೈಸಿ, ತಾಲೂಕಿನ ಪ್ರತಿಷ್ಠಿತ ಬ್ಯಾಂಕಾಗಿ ಗುರುತಿಸಿಕೊಂಡಿರುವ ಅಂಕೋಲಾ ಅರ್ಬನ್ ಕೋ ಆಪರೇಟಿವ್ ಬ್ಯಾಂಕಿಗೆ ಗೌರವಿಸಲಾಯಿತು.

  300x250 AD

  ಕಾರ್ಯಕ್ರಮದಲ್ಲಿ ಕೇಂದ್ರ ಸರಕಾರದ ಸಹಕಾರ ಖಾತೆಯ ರಾಜ್ಯ ಸಚಿವ ಬಿ.ಎಲ್.ವರ್ಮಾ, ಕೇಂದ್ರ ಸರಕಾರದ ಹಣಕಾಸು ಇಲಾಖೆಯ ರಾಜ್ಯ ಮಂತ್ರಿ ಡಾ.ಭಾಗವತ ಕಿಶನರಾವ್ ಕರಾಡ ಮತ್ತು ರಾಷ್ಟೀಯ ಪಟ್ಟಣ ಸಹಕಾರ ಬ್ಯಾಂಕುಗಳ ಮಹಾಮಂಡಳದ ಅಧ್ಯಕ್ಷ ಜೋತಿಂದ್ರ ಮೆಹತಾ ಅವರು ಅಂಕೋಲಾ ಅರ್ಬನ್ ಬ್ಯಾಂಕಿಗೆ ಸನ್ಮಾನಿಸಿ ಗೌರವಿಸಿದರು.

  ಬ್ಯಾಂಕಿನ ವತಿಯಿಂದ ಅಂಕೋಲಾ ಅರ್ಬನ್ ಬ್ಯಾಂಕ ಅಧ್ಯಕ್ಷ ಭಾಸ್ಕರ ಕೆ. ನಾರ್ವೇಕರ, ನಿರ್ದೇಶಕ ರಾಜೇಂದ್ರ ಶಾಂಬಾ ಶೆಟ್ಟಿ ಮತ್ತು ಪ್ರಧಾನ ವ್ಯವಸ್ಥಾಪಕ ರವೀಂದ್ರ ಪಿ.ವೈದ್ಯ ಅವರು ಉಪಸ್ಥಿತರಿದ್ದು ಸನ್ಮಾನದ ಗೌರವ ಸ್ವೀಕರಿಸಿದರು.

  Share This
  300x250 AD
  300x250 AD
  300x250 AD
  Back to top