• first
    second
    third
    previous arrow
    next arrow
  • ತೋಟದಲ್ಲಿ ಗುಡ್ಡ ಕುಸಿದು ಹಾನಿ; ಪರಿಹಾರಕ್ಕೆ ಆಗ್ರಹ

    300x250 AD

    ಯಲ್ಲಾಪುರ: ತಾಲೂಕಿನ ನಂದೊಳ್ಳಿ ಗ್ರಾ.ಪಂ ವ್ಯಾಪ್ತಿಯ ಸೂಳಗಾರಿನಲ್ಲಿ ತೋಟದ ಮೇಲೆ ಗುಡ್ಡ ಕುಸಿದು ಹಾನಿ ಉಂಟಾಗಿದೆ.
    ಸೂಳಗಾರಿನ ಶಿವರಾಮ ಭಟ್ಟ ಅವರಿಗೆ ಸೇರಿದ ತೋಟದಲ್ಲಿ ಗುಡ್ಡ ಕುಸಿದು ಅಡಿಕೆ ಮರಗಳಿಗೆ ಹಾನಿಯಾಗಿದೆ. ತೋಟದಲ್ಲಿನ ಹಳ್ಳದ ಮೇಲೆ ಗುಡ್ಡ ಕುಸಿದು, ಹಳ್ಳದ ನೀರು ತೋಟದಲ್ಲಿ ಹರಿಯುವಂತಾಗಿದೆ. ಗುಡ್ಡದ ಮಣ್ಣಿನ ಜತೆಗೆ ದೊಡ್ಡ ದೊಡ್ಡ ಮರಗಳೂ ಕುಸಿದು ತೋಟದತ್ತ ಅಪ್ಪಳಿಸಿವೆ.
    ಮನೆಯ ಪಕ್ಕ ಇರುವ ಕೊಟ್ಟಿಗೆಯ ಕೆಳಗಿನ ಧರೆ ಕುಸಿಯಲಾರಂಭಿಸಿದ್ದು, ಕೊಟ್ಟಿಗೆ ಕುಸಿಯುವ ಭೀತಿ ಉಂಟಾಗಿದೆ. ತೋಟದಲ್ಲಿ ಇರುವ ಕೆರೆಯೊಂದರಲ್ಲಿ ಗುಡ್ಡದ ಮೇಲಿನ ಮರವೊಂದು ಕುಸಿದಿದೆ. ಮಳೆಯಿಂದ ಅಪಾರ ಪ್ರಮಾಣದ ಹಾನಿ ಉಂಟಾಗಿದ್ದು, ತೋಟ ರಕ್ಷಿಸಿಕೊಳ್ಳಲು ಸ್ಥಳೀಯ ಆಡಳಿತ, ಅರಣ್ಯ ಇಲಾಖೆ ನೆರವಾಗಬೇಕೆಂದು ಶಿವರಾಮ ಭಟ್ಟ ಆಗ್ರಹಿಸಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top