• first
  second
  third
  previous arrow
  next arrow
 • ಒಡೆದಾಳುವ ದುಷ್ಟಶಕ್ತಿ ಮೆಟ್ಟಿ ನಿಂತು ಸವಾಲು ಎದುರಿಸುವ ವ್ಯಕ್ತಿತ್ವ ಬೆಳೆಸಿಕೊಳ್ಳಿ:ಸ್ಪೀಕರ್ ಕಾಗೇರಿ

  300x250 AD

  ಸಿದ್ದಾಪುರ: ಪಟ್ಟಣದ ಶಂಕರಮಠದಲ್ಲಿ ಜಿಲ್ಲಾಡಳಿತ,ಜಿಲ್ಲಾ ಪಂಚಾಯಿತಿ,ತಾಲೂಕು ಆಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಭಾರತ ಸ್ವಾತಂತ್ರ್ಯದ ಅಮೃತಮಹೋತ್ಸವದ ಅಂಗವಾಗಿ ಶನಿವಾರ ನಡೆದ ಅಮೃತಭಾರತಿಗೆ ಕನ್ನಡದಾರತಿ ಕಾರ್ಯಕ್ರಮವನ್ನು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಉದ್ಘಾಟಿಸಿದರು.

  ನಂತರ ಮಾತನಾಡಿದ ಅವರು ಜಗತ್ತಿಗೆ ಜ್ಞಾನವನ್ನು ನೀಡಿದ ಭಾರತ ವಿಶ್ವಗುರುವಿನ ಸ್ಥಾನದತ್ತ ಸಾಗುತ್ತಿದೆ. ಈ ಸಂದರ್ಭದಲ್ಲಿಯಾದರೂ ನಾವು ನಮ್ಮ ಇತಿಹಾಸವನ್ನು ತಿಳಿದುಕೊಳ್ಳಬೇಕು. ಯಾರೋ ಹೇಳಿದ ಇತಿಹಾಸವನ್ನು ನಾವು ತಿಳಿದುಕೊಳ್ಳುವುದಲ್ಲ. ಭವಿಷ್ಯದ ಕನಸನ್ನು ಕಾಣುವುದಕ್ಕೆ ನಮಗೆ ಸ್ಪಷ್ಟತೆ ಇರಬೇಕು. ದೇಶ ಮೊದಲು ಎನ್ನುವ ಭಾವನೆ ಎಲ್ಲರಲ್ಲಿಯೂ ಇರಬೇಕು ಎಂದು ಹೇಳಿದರು.

  300x250 AD

  ದೇಶದ ಸ್ವಾತಂತ್ರ್ಯಕ್ಕಾಗಿ ಹಲವರು ತ್ಯಾಗ, ಬಲಿದಾನ ಮಾಡಿದ್ದಾರೆ . ಅವರ ಕುರಿತು ತಿಳಿದುಕೊಳ್ಳುವ ಅವಶ್ಯಕತೆ ಇದೆ. ಈ ಹಿಂದೆ ನಮ್ಮನ್ನು ಒಡೆದು ಆಳುವ ದುಷ್ಟಶಕ್ತಿ ಇತ್ತು. ಈಗಲೂ ಕಾಣುತ್ತೇವೆ. ಆದರೆ ಈಗ ಅಂತಹ ದುಷ್ಟಶಕ್ತಿಗಳಿಗೆ ತಲೆ ಎತ್ತಲು ಆಗುತ್ತಿಲ್ಲ. ಸ್ವಾರ್ಥವನ್ನು ಸಾಧಿಸಿಕೊಳ್ಳುವ ಶಕ್ತಿ ಎಲ್ಲ ಕಡೆ ಇದೆ. ವಿಶಾಲ ದೃಷ್ಟಿಕೋನದ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು.ಸ್ವಾರ್ಥಶಕ್ತಿಗಳಿಗೆ ಅವಕಾಶ ನೀಡಬಾರದು. ಸ್ವಾತಂತ್ರ್ಯವನ್ನು ಪಡೆಯುವುದಕ್ಕೆ ಬ್ರಿಟೀಷರ ಸಂಗಡ ಹೋರಾಡಿದಂತೆ ಅದಕ್ಕೂ ಪೂರ್ವದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರಿದ್ದಾರೆ. ಅಂತವರ ಇತಿಹಾಸವನ್ನೂ ತಿಳಿದುಕೊಳ್ಳಬೇಕು. ಭವಿಷ್ಯದ ಸವಾಲನ್ನು ಎದುರಿಸುವದಕ್ಕೆ ಎಲ್ಲರೂ ಸಿದ್ದರಾಗಬೇಕು. ಇದು ಸರಿಯಾದ ಕಾಲ. ಎಲ್ಲರೂ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಬೇಕು.
  ಸಿದ್ದಾಪುರ, ಅಂಕೋಲಾ ಹಾಗೂ ಕಾರವಾರದ ಜನತೆ ದೇಶದ ಸ್ವಾತಂತ್ರ್ಯಕ್ಕಾಗಿ ಹೆಚ್ಚು ಹೋರಾಡಿದ್ದಾರೆ ಅವರನ್ನು ಸ್ಮರಿಸಿಕೊಳ್ಳಬೇಕು ಎಂದು ಹೇಳಿದರು.
  ಪ.ಪಂ ಅಧ್ಯಕ್ಷೆ ಚಂದ್ರಕಲಾ ಸುರೇಶ ನಾಯ್ಕ ಅಧ್ಯಕ್ಷತೆವಹಿಸಿದ್ದರು.ಮೈಸೂರು ಅಕಾಶವಾಣಿ ಕೇಂದ್ರದ ಕಾರ್ಯಕ್ರಮ ನಿರೂಪಕ ದಿವಾಕರ ಹೆಗಡೆ ಉಪನ್ಯಾಸ ನೀಡಿದರು. ಎಸಿ ದೇವರಾಜ್ ಆರ್, ತಾಪಂ ಇಒ ಪ್ರಶಾಂತರಾವ್, ಸಾಹಿತಿ ಜಿ.ಜಿ.ಹೆಗಡೆ ಬಾಳಗೋಡ, ತಾಲೂಕು ಕಸಾಪ ಅಧ್ಯಕ್ಷ ಗೋಪಾಲ ನಾಯ್ಕ ಇದ್ದರು.ತಹಸೀಲ್ದಾರ ಸಂತೋಷ ಭಂಡಾರಿ ಸ್ವಾಗತಿಸಿದರು. ಶಿಕ್ಷಕರಾದ ಎಂ.ಆರ್.ಭಟ್ಟ, ವೆಂಕಟೇಶ ಮಡಿವಾಳ ನಿರ್ವಹಿಸಿದರು.
  ಸಿದ್ದಾಪುರ ರಂಗಸೌಗಂಧ ತಂಡದವರಿಂದ ದೇವಿಯ ದೀವೆಗೆ ನಾಟಕ ಪ್ರದರ್ಶನಗೊಂಡಿತು ಹಾಗೂ ಸ್ವಾತಂತ್ರ್ಯಕ್ಕಾಗಿ ಹೋರಾಡಿದ 21ಜನ ಪತ್ನಿಯರನ್ನು ಸನ್ಮಾನಿಸಲಾಯಿತು.
  ಆಕರ್ಷಕ ಮೆರವಣಿಗೆ: ಪಟ್ಟಣದ ಚಂದ್ರಘಟಗಿ ಪಠಾಂಗಣದಿಂದ ಶಂಕರಮಠದವರೆಗೆ ವಿವಿಧ ಕಲಾತಂಡಗಳೊಂದಿಗೆ ಮೆರವಣಿಗೆ ನಡೆಯಿತು. ಎಸಿ ದೇವರಾಜ್ ಆರ್.ತಹಸೀಲ್ದಾರ ಸಂತೋಷ ಭಂಡಾರಿ ಸಹಿತ ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು, ಶಾಲಾ ವಿದ್ಯಾರ್ಥಿಗಳಿದ್ದರು.

  Share This
  300x250 AD
  300x250 AD
  300x250 AD
  Back to top