• Slide
    Slide
    Slide
    previous arrow
    next arrow
  • ಬಗೆ ಬಗೆಯ ವೇಷ ಭೂಷಣ :ಗಮನ ಸೆಳೆದ ಛದ್ಮ ವೇಷ

    300x250 AD

    ಕುಮಟಾ: ಸ್ವಾಮಿ ವಿವೇಕಾನಂದ ,ಭಗತಸಿಂಗ್ ,ರಾಧೆ ,ಕೃಷ್ಣ ,ಆಂಜನೇಯ,ಈಶ್ವರ,ವ್ಯೆದ್ಯ ,ಶಿಕ್ಷಕಿ ,ಸ್ಪೆಡರ ಮ್ಯಾನ್ ಹೀಗೆ ಹತ್ತು ಹಲವಾರು ವೇಷ ಭೂಷಣದೊಂದಿಗೆ ಪುಟಾಣಿ ವಿದ್ಯಾರ್ಥಿಗಳು ಶಾಲೆಯಲ್ಲಿ ಭಾವಾಭಿವೃತ್ತಿ ವ್ಯಕ್ತಪಡಿಸಿ ಗಮನ ಸೆಳೆದರು. ಈ ಮೂಲಕ ತಾಲೂಕಿನ ಕೊಂಕಣ ಎಜ್ಯುಕೇಶನ್ ಟ್ರಸ್ಟನ ಸರಸ್ವತಿ ವಿದ್ಯಾ ಕೇಂದ್ರ ಪ್ರಾಥಮಿಕ ಶಾಲೆಯಲ್ಲಿ ಶನಿವಾರದ ಶಾಲಾ ಬ್ಯಾಗ ರಹಿತ ದಿನವನ್ನು ಅತ್ಯಂತ ಅರ್ಥಪೂರ್ಣವಾಗಿ ಸಂಪನ್ನಗೊಳಿಸಲಾಯಿತು.

    ಪ್ರತಿ ಶನಿವಾರ ಬ್ಯಾಗ್ ರಹಿತ ದಿನವನ್ನು ವಿಭಿನ್ನ ಚಟುವಟಿಕೆಗಳ ಮೂಲಕ ಅರ್ಥಪೂರ್ಣವಾಗಿಸಿ, ಸಂಸ್ಥೆಯ ವಿದ್ಯಾರ್ಥಿಗಳನ್ನು ಕ್ರಿಯಾಶೀಲವಾಗಿಸುವ ನಿಟ್ಟಿನಲ್ಲಿ ನಿರಂತರ ಪ್ರಯತ್ನ ನಡೆಯುತ್ತಿದೆ. ಇದರ ಅಂಗವಾಗಿ ಒಂದನೇ ತರಗತಿಯ ಮಕ್ಕಳಿಗೆ ಛದ್ಮವೇಶದ ಪ್ರದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಒಂದನೇ ತರಗತಿ ಆಂಗ್ಲ ಮಾಧ್ಯಮ ಹಾಗೂ ಕನ್ನಡ ಮಾಧ್ಯಮದ ವಿದ್ಯಾರ್ಥಿ-ವಿದ್ಯಾರ್ಥಿನಿಯರಾದ ಅದ್ವಿಕ್ , ಕಾರ್ತಿಕ ,ಕುಷ್, ನೀರಜ್, ನಿಹಾರ್, ಪ್ರಿತಮ್, ಆರ್ಯನ, ಶ್ರಿಹಾನ್, ಸ್ಕಂದ , ಆದ್ಯಾ, ಆರಾದ್ಯ, ಅನಯ್,ಜೀವಿಕಾ,ಕಾಮಾಕ್ಷಿ ,ಪ್ರಗತಿ ,ಅರ್ಚಿತ, ಈಶಾನಿ,ಪ್ರಣವ ಭಟ್ಟ ,ಪ್ರಣವ ನಾಯ್ಕ,ಅಮಿತ್, ದ್ರುವ ನಾಯಕ , ಶ್ರೇಷ್ಠಾ , ಶೌರ್ಯ , ಆಧ್ಯಾ ನಾಯ್ಕ , ಸಾನ್ವಿ ಎಸ್ ,ಅಶ್ವಿನ್,ರಜತ್,ಅನುಶ್ರೀ ,ತಾನಿ,ಸಾತ್ವಿಕ್ ಆರ್,ಶ್ರೀಹಾನ ನಾಯ್ಕ ,ದಿಶಾಂತ , ಸುಮಂತ, ಸುಮನಾ ,ಪ್ರಣವ್ಯ ,ಅವನಿ , ಋತ್ವಿಕ್,ಧಾತ್ರಿ ,ನಿಶಾಂತ ,ಧ್ರುವ ,ಸಾಯಿಪ್ರಣೀತ,ವಿನಯ್ ಇವರುಗಳು ವ್ಯೆದ್ಯ , ಸ್ಪೆಡರ ಮ್ಯಾನ್ ,ಮಾವಿನ ಹಣ್ಣು ,ಆಂಜನೇಯ ,ಸುಭಾಷ ಚಂದ್ರ ಬೋಷ್,ಚಿಟ್ಟೆ ,ಕೃಷ್ಣ,ಪೈಲೆಟ್ ,ರಾಧೆ ,ಪಾರ್ವತಿ ,ಶಿಕ್ಷಕಿ ,ಮರ ,ರಾಕೆಟ್ ,ಸ್ವಾಮಿ ವಿವೇಕಾನಂದ ,ಒನಕೆ ಒಬವ್ವ ,ಪುರಂದರ ದಾಸ ,ಸ್ಯೆನಿಕ ,ಅಂಬೇಡ್ಕರ್ ,ಚಂದ್ರಶೇಖರ್ ಆಜಾದ್ ,ಕಿತ್ತರೂ ರಾಣಿ ಚೆನ್ನಮ್ಮ, ಚಾರ್ಲಿ ಚಾಪ್ಲಿನ್,ಶಿವ ,ಕರೋನಾ ವ್ಯಾಕ್ಸಿನ್ ಮುಂತಾದ ಪಾತ್ರದಲ್ಲಿ ಗಮನ ಸೆಳೆದರು.

    300x250 AD

    ಛದ್ಮ ವೇಷ ಪ್ರದರ್ಶನದ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಹಿರಿಯ ವಿಶ್ವಸ್ಥರಾದ ರಮೇಶ್ ಪ್ರಭು ಉದ್ಘಾಟಿಸಿದರು. ಜೊತೆಗೆ ವಿದ್ಯಾರ್ಥಿಗಳು ಇಂತಹ ಚಟುವಟಿಕೆಯಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳುವಂತೆ ಕರೆ ನೀಡಿದರು. ಪಾಲಕರ ಪರವಾಗಿ ವಿನಾಯಕ ನಾಯ್ಕ ಮಾತನಾಡಿ ಸರಸ್ವತಿ ವಿದ್ಯಾ ಕೇಂದ್ರ ದಂತಹ ಸಂಸ್ಥೆಯಲ್ಲಿ ನಮ್ಮ ಮಕ್ಕಳು ಕಲಿಯುತ್ತಿರುವುದು ಹೆಮ್ಮೆಯ ವಿಚಾರವಾಗಿದೆ .ಮಗುವಿನ ಸರ್ವತೋಮುಖ ಅಭಿವೃದ್ಧಿಯಲ್ಲಿ ಸಂಸ್ಥೆಯ ಹಾಗೂ ಶಿಕ್ಷಕರ ಪಾತ್ರ ಹಿರಿದು ಎಂದರು. ಮುಖ್ಯಶಿಕ್ಷಕಿ ಸುಜಾತ ನಾಯ್ಕ .ಶೈಕ್ಷಣಿಕ ಮಾರ್ಗದರ್ಶಕ ಬಿ ಎಸ್ ಗೌಡ ಹಾಗೂ ಆರ್ ಎಚ್ ದೇಶ ಭಂಡಾರಿ ಹಾಗೂ ಪಾಲಕ ವೃಂದದವರು, ಶಿಕ್ಷಕರು, ವಿದ್ಯಾರ್ಥಿಗಳು ಕಾರ್ಯಕ್ರಮಕ್ಕೆ ಸಾಕ್ಷಿಯಾದರು .ಶಿಕ್ಷಕ ಗಣೇಶ ಜೋಶಿ ಕಾರ್ಯಕ್ರಮ ನಿರೂಪಿಸಿದರು .ತರಗತಿ ಶಿಕ್ಷಕರಾದ ಶ್ಯಾಮಲಾ ಪಟಗಾರ, ಗಾಯತ್ರಿ ನಾಯ್ಕ,ಮಹಾಲಕ್ಷ್ಮಿ ಕಾಮತ್ ಹಾಗೂ ಭವ್ಯಾ ನಾಯ್ಕ ಸಹಕರಿಸಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top