• first
  second
  third
  previous arrow
  next arrow
 • ಶಿವಾನಿ ಬುಕ್ ಸ್ಟಾಲ್‌ನ ಸುಬ್ರಹ್ಮಣ್ಯ ಭಂಡಾರಿ ನಿಧನ

  300x250 AD

  ಹೊನ್ನಾವರ: ಪಟ್ಟಣದ ಶಿವಾನಿ ಬುಕ್ ಸ್ಟಾಲ್‌ನಲ್ಲಿ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಸುಬ್ರಹ್ಮಣ್ಯ ಭಂಡಾರಿ ಅವರು ಶುಕ್ರವಾರ ನಿಧನರಾದರು.

  ಕೆಲ ದಿನಗಳ ಹಿಂದೆ ತಾಲೂಕಿನ ಖರ್ವಾ ಎಲೆಮಾಳದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೆ ಶುಕ್ರವಾರ ನಿಧನರಾದರು. ಮೃತರಿಗೆ ಓರ್ವ ಪುತ್ರ, ಪತ್ನಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಸುಬ್ರಹ್ಮಣ್ಯ ಅವರ ನಿಧನಕ್ಕೆ ಶಿವಾನಿ ಬುಕ್ ಸ್ಟಾಲ್ ಮಾಲಿಕ ಕೃಷ್ಣಮೂರ್ತಿ ಭಟ್ ಸೇರಿದಂತೆ ಅನೇಕರು ಕಂಬನಿ ಮಿಡಿದಿದ್ದಾರೆ.

  300x250 AD

  ಶಿಕ್ಚಕರು, ವಿದ್ಯಾರ್ಥಿಗಳ ಅಚ್ಚುಮೆಚ್ಚಿನವರಾಗಿದ್ದರು: ಇನ್ನು ಸುಬ್ರಹ್ಮಣ್ಯ ಭಂಡಾರಿ ಅವರೆಂದರೆ ಶಿಕ್ಷಕರು, ವಿದ್ಯಾರ್ಥಿಗಳಿಗೆ ಪ್ರೀತಿ ಪಾತ್ರರಾಗಿದ್ದರು. ಬಹುದೊಡ್ಡ ಅಂಗಡಿ ಮಳಿಗೆಯಲ್ಲಿ ಪುಸ್ತಕಗಳ ಭಂಡಾರವೇ ಅವರ ತೋರು ಬೆರಳಲ್ಲಿತ್ತು. ಯಾವ ಪುಸ್ತಕ ಕೇಳಿದರೂ ಕ್ಷಣಾರ್ಧದಲ್ಲಿ ಪುಸ್ತಕ ಕೈಗೆ ನೀಡುವ ಕ್ರಿಯಾಶೀಲ ವ್ಯಕ್ತಿಗಳಾಗಿದ್ದರು. ಸುಬ್ರಹ್ಮಣ್ಯ ಅವರ ಅಕಾಲಿಕ ನಿಧನ ಹೊನ್ನಾವರ ಜನತೆಗೆ ಬರಸಿಡಿಲು ಬಡಿದಂತಾಗಿದೆ.

  Share This
  300x250 AD
  300x250 AD
  300x250 AD
  Back to top