ಹೊನ್ನಾವರ: ತಾಲೂಕಾ ಮೀನುಗಾರಿಕಾ ಇಲಾಖೆಯಿಂದ ಹೊನ್ನಾವರ- ಭಟ್ಕಳ ಕ್ಷೇತ್ರ ವ್ಯಾಪ್ತಿಯ ಆರು ಪರಿಶಿಷ್ಟ ಜಾತಿಯ ಮೀನುಗಾರರಿಗೆ ವಿಶೇಷ ಘಟಕ ಯೋಜನೆಯಡಿ ದೋಣಿ, ಇಂಜಿನ್, ಲೈಫ್ ಜಾಕೆಟ್ ಖರೀದಿಗೆ ಸಹಾಯಧನ ವಿತರಣಾ ಕಾರ್ಯಕ್ರಮ ಪಟ್ಟಣದ ಶಾಸಕರ ಕಚೇರಿ ಆವರಣದಲ್ಲಿ ನಡೆಯಿತು.
ಶಾಸಕ ಸುನೀಲ ನಾಯ್ಕ ವಿತರಿಸಿ ಮಾತನಾಡಿ, ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ತಲಾ 4.25 ಘಟಕ ವೆಚ್ಚದ ಈ ಯೋಜನೆಯಡಿ 3.60 ಲಕ್ಷ ರೂ.ಗಳ ಸಹಾಯಧನ ವಿತರಿಸಲಾಯಿತು.ಮೀನುಗಾರಿಕಾ ಇಲಾಖಾಧಿಕಾರಿ ತಿಮ್ಮಪ್ಪ ಎಂ.ಎಚ್., ಬಿಜೆಪಿ ಮುಖಂಡರು, ಕಾರ್ಯಕರ್ತರು ಇದ್ದರು.