ದಾಂಡೇಲಿ: ನಗರದ ಕ್ರಿಯಾಶೀಲ ಸಂಘಟನೆಯಾಗಿರುವ ಲಯನ್ಸ್ ಕ್ಲಬಿನ ನೂತನ ಸಾಲಿಗೆ ಅಧ್ಯಕ್ಷರಾಗಿ ನಗರದ ಸ್ವಾಪ್ಟೆಕ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸೈಯದ್ ಇಸ್ಮಾಯಿಲ್ ತಂಗಳ ಅವರು ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ನಟ, ಕಲಾವಿದ ಮಾರುತಿ ರಾವ್ ಮಾನೆ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಖಜಾಂಚಿಯಾಗಿ ಅರಣ್ಯ ಇಲಾಖೆಯ ಗಜಾನನ.ಕೆ. ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಉದ್ಯಮಿ ಉದಯ ಶೆಟ್ಟಿ ಮತ್ತು ನಿವೃತ್ತ ಕೆಪಿಸಿ ಅಧಿಕಾರಿ ಪಿ.ಕೆ.ಜೋಶಿ, ಸಹ ಕಾರ್ಯದರ್ಶಿಯಾಗಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ.ಎನ್.ಎ.ಜಂಗೂಬಾಯಿ, ಜೊತೆ ಕೋಶಾಧಿಕಾರಿಯಾಗಿ ಇಮ್ತಿಯಾಜ್ ಅತ್ತಾರ್, ಇತರ ಪದಾಧಿಕಾರಿಗಳಾಗಿ ನಾಗರಾಜ ಶೆಟ್ಟಿ, ಉಮೇಶ ಗುಂಡುಪ್ಕರ್, ಗಣೇಶ ಖಾನಪುರ, ಎನ್.ವಿ.ಪಾಟೀಲ, ವಿಜಯ್.ಎಂ, ಎಂ.ಸಿ.ಹಿರೇಮಠ, ಚೇತನ್.ಕೆ ಮತ್ತು ಯು.ಎಸ್.ಪಾಟೀಲ ಅವರನ್ನು ಆಯ್ಕೆ ಮಾಡಲಾಯಿತು.
ಹಾಲಿ ಅಧ್ಯಕ್ಷ ನಾರಾಯಣ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಸಭೆಯಲ್ಲಿ ಲಯನ್ಸ್ ಕ್ಲಬ್‌ನ ಹಿರಿಯ ಕಿರಿಯ ಸದಸ್ಯರು ಉಪಸ್ಥಿತರಿದ್ದರು. ನೂತನ ಪದಾಧಿಕಾರಿಗಳಿಗೆ ಶುಭ ಕೋರಿದ್ದಾರೆ.