• first
    second
    third
    previous arrow
    next arrow
  • ವಿದ್ಯಾರ್ಥಿಗಳಿಂದ ಚರಂಡಿ ಸ್ವಚ್ಛ: ಅಸಮಾಧಾನಗೊಂಡ ಪಾಲಕರು

    300x250 AD

    ಯಲ್ಲಾಪುರ: ಪಟ್ಟಣದ ಹೃದಯ ಭಾಗದಲ್ಲಿರುವ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಶಾಲಾ ವಿದ್ಯಾರ್ಥಿಗಳನ್ನು ಬಳಸಿಕೊಂಡು ಬಸ್ಟಾಂಡ್ ಎದುರಿನ ಚರಂಡಿಯನ್ನು ಸ್ವಚ್ಛ ಮಾಡುತ್ತಿರುವ ಸನ್ನಿವೇಶ ಕಂಡು ಬಹಳಷ್ಟು ಜನ ಸಾರ್ವಜನಿಕರು ತೀವ್ರ ಅಸಮಾದಾನ ವ್ಯಕ್ತಪಡಿಸಿದ್ದಾರೆ.

    ಚರಂಡಿಯಲ್ಲಿಯ ಕಲ್ಲು ಕಸ ಎತ್ತಿ ಹಾಕುತ್ತಿದ್ದ ವಿದ್ಯಾರ್ಥಿಗಳಿಗೆ ಕೆಲವು ಶಿಕ್ಷಕರು ಮಾರ್ಗದರ್ಶನ ಮಾಡುತ್ತಿದ್ದದನ್ನು ಕಂಡು ಶಿಕ್ಷಕರೇಕೆ ಚರಂಡಿಯಲ್ಲಿ ಇಳಿಯುತ್ತಿಲ್ಲ ಎಂದು ಕೇಳಿದ್ದಾರೆ. ಬಸ್ ಸ್ಟಾಂಡ್ ಎದುರಿನ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಸುತ್ತ ಕಂಪೌಂಡ್ ನಿರ್ಮಿಸಲಾಗಿದೆ. ಸಾಧಾರಣ ಮಳೆ ಸುರಿದಾಗ ಕಂಪೌಂಡ್ ನೊಳಗಿನ ನೀರು ಸೇರಿಕೊಳ್ಳುತ್ತದೆ. ಕಂಪೌಂಡ್ ನಿರ್ಮಿಸುವಾಗಲೇ ಮೈದಾನದಲ್ಲಿಯ ನೀರು ಹೊರ ಹೋಗುವಂತೆ ಕಂಪೌಂಡ್ ಗೆ ಸರಿಯಾದ ತೂಬುಗಳನ್ನು ನಿರ್ಮಿಸಬೇಕಾಗಿತ್ತು. ಆದರೆ ಅಂತಹ ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದ ಕಾರಣ ಸ್ವಲ್ಪವೇ ಮಳೆ ಸುರಿದರೂ ಕೂಡ ಶಾಲೆಯ ಮೈದಾನದಲ್ಲಿ ನೀರು ತುಂಬಿ ಕೆರೆಯಂತಾಗುತ್ತದೆ. ಈ ನೀರನ್ನು ಹೊರ ಹಾಕಲು ಶಾಲೆಯ ಮಕ್ಕಳನ್ನೇ ಬಳಸಿಕೊಂಡು ಸ್ವಚ್ಛ ಮಾಡುತ್ತಿರುವುದು ಎಷ್ಟು ಸಮಂಜಸ ಎನ್ನುವ ಪ್ರಶ್ನೆ ಬಸ್ ಸ್ಟಾಂಡ್‌ನಲ್ಲಿದ್ದ ಹಲವಾರು ಪಾಲಕರು ಕೇಳುವಂತಾಗಿದೆ.

    ಮೊದಲೇ ಸರ್ಕಾರಿ ಶಾಲೆಯಿಂದ ಮಕ್ಕಳು ದೂರ ಸರಿಯುತ್ತಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಕೆಲವೊಂದು ಅನಗತ್ಯ ವಿಷಯಗಳಿಗೆ ಮಕ್ಕಳನ್ನು ಬಳಸಿಕೊಳ್ಳುವುದು ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಮಕ್ಕಳನ್ನು ಸರ್ಕಾರಿ ಶಾಲೆಗಳ ಬದಲಾಗಿ ಖಾಸಗಿ ಶಾಲೆಗೆ ಕಳಿಸುತ್ತಿದ್ದಾರೆ. ಮತ್ತೆ ಮತ್ತೆ ಇಂತಹ ಘಟನೆಗಳನ್ನು ಮರುಕಳಿಸಿ ಪಾಲಕರು ಪ್ರಶ್ನಿಸುವಂತೆ ಮಾಡಿದೆ. ದಶಕದ ಹಿಂದೆ ಇದೇ ಶಾಲೆಯಲ್ಲಿ ಮಕ್ಕಳನ್ನು ಶಾಲೆ ಮೇಲೆ ಹತ್ತಿಸಿ ಹೆಂಚು ಸರಿಪಡಿಸುತ್ತಿದ್ದು ಸಾರ್ವಜನಿಕ ವಲಯದಲ್ಲಿ ಬಹಳ ಟೀಕೆಗೆ ಗುರಿಯಾಗಿತ್ತು. ಪತ್ರಿಕೆಗಳಲ್ಲಿ ವರದಿ ಕೂಡ ಪ್ರಕಟವಾಗಿತ್ತು. ಈಗ ಬಸ್ ನಿಲ್ದಾಣದ ಎದುರು ಸಾಲು ಅಂಗಡಿಗಳಲ್ಲಿ ಪಕ್ಕ ಇರುವ ಗಟಾರನ್ನು ಮಕ್ಕಳಿಂದ ಸ್ವಚ್ಛ ಮಾಡಿಸುವುದು ಎಷ್ಟು ಸಮಂಜಸ. ಚರಂಡಿಯಲ್ಲಿರುವ ಗಾಜು, ವಿಷ ಜಂತುಗಳಿಂದ ಮಕ್ಕಳಿಗೆ ತೊಂದರೆ ಆದರೇ ಯಾರೂ ಜವಾಬ್ದಾರರು ಮುಂತಾದ ಪ್ರಶ್ನೆ ಹುಟ್ಟಲು ಕಾರಣವಾಗಿದೆ.

    300x250 AD

    ಮಕ್ಕಳನ್ನು ಶಾಲೆಯ ಹಂಚು ಬದಲಾಯಿಸುವುದು, ಅಪಾಯಕಾರಿ ಶಾಲಾ ಕೆಲಸಗಳಲ್ಲಿ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಬಾರದು ಎನ್ನುವ ನಿಯಮವಿದೆ. ಆದರೇ ಅದ್ಯಾಕೋ ಶಿಕ್ಷಕರು ನಿಯಮ ಮೀರಿ ಮಕ್ಕಳನ್ನು ಬಳಸಿಕೊಂಡು ಶಾಲೆಗೆ ಹಂಚು ಬದಲಾಯಿಸುವುದು ಮತ್ತು ಅಪಾಯಕಾರಿ ಗಟಾರಿಗಳಲ್ಲಿ ಮಕ್ಕಳನ್ನು ಇಳಿಸಿ ಸ್ವಚ್ಛತೆ ಮಾಡುವುದು ಕಂಡು ಬಂದಿದೆ. ಈ ಕುರಿತು ಬಿಇಓ ಗಮನ ನೀಡಬೇಕಾಗಿದೆ.

    ಕೂಲಿ ಕಾರ್ಮಿಕರನ್ನು ಕಳುಹಿಸಿದ ಸೋಮು:ಶಾಲೆ ಹೊರಗಡೆಯ ಚರಂಡಿಯನ್ನು ಮಕ್ಕಳು ಸ್ವಚ್ಛ ಮಾಡುತ್ತಿದ್ದಾರೆ ಎನ್ನುವ ವಿಷಯ ತಿಳಿಯುತ್ತಿದ್ದಂತೆ ರವೀಂದ್ರ ನಗರ ವಾರ್ಡ್ ಸದಸ್ಯ ಸೋಮೇಶ್ವರ ನಾಯ್ಕ ಇಬ್ಬರು ಕೂಲಿ ಕಾರ್ಮಿಕರನ್ನು ಶಾಲೆಗೆ ಕಳಿಸಿಕೊಟ್ಟಿದ್ದಾರೆ. ತಮ್ಮ ವಾರ್ಡ್ ವ್ಯಾಪ್ತಿಗೆ ಶಾಲೆ ಬರದಿದ್ದರೂ ಕೂಡ ಸಾಮಾಜಿಕ ಕಳಕಳಿಯ ಹಿನ್ನೆಲೆಯಲ್ಲಿ ಕೂಲಿ ಕಾರ್ಮಿಕರನ್ನು ಬಳಸಿ ನೀರು ಹೊರ ಹಾಕಿಸುತ್ತಿದ್ದಾರೆ.

    Share This
    300x250 AD
    300x250 AD
    300x250 AD
    Back to top