ಯಲ್ಲಾಪುರ: ವಿದ್ಯಾರ್ಥಿಗಳು ದಾನಿಗಳು ನೀಡಿದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ವಿದ್ಯಾರ್ಜನೆಯಲ್ಲಿ ಯಶಸ್ಸು ಕಾಣಬೇಕು. ಕಲಿತ ಶಾಲೆ, ಕಲಿಸಿದ ಗುರುಗಳನ್ನು ಮರೆಯಬಾರದು. ದುಡಿಯುವ ಹೊತ್ತಿಗೆ ಒಂದಿಷ್ಟು ದಾನ ಮಾಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದು ಕಂಚನಳ್ಳಿ ಜನಪ್ರಿಯ ಟ್ರಸ್ಟ್ ಸಂಚಾಲಕ ಮಹೇಶ ಭಟ್ ಕಂಚನಳ್ಳಿ ಕರೆ ನೀಡಿದರು.
ಅವರು ಶುಕ್ರವಾರ ಬಿಸಗೋಡ ಸರಕಾರಿ ಪ್ರೌಢಶಾಲೆಯಲ್ಲಿನ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ಗಳನ್ನು ವಿತರಿಸಿ ಮಾತನಾಡಿದರು.
ಶಿಕ್ಷಕ ಸತೀಶ ಹೆಗಡೆ ಸ್ವಾಗತಿಸಿದರು. ಈ ಸಂದರ್ಭ ಶಾಲಾ ಹಿರಿಯ ಶಿಕ್ಷಕಿ ಶಾಲಿನಿ ನಾಯಕ, ಶಿಕ್ಷಕರಾದ ಸದಾನಂದ ದಬಗಾರ, ರವಿಕುಮಾರ, ವಿ.ಎಮ್.ಭಟ್ ಉಪಸ್ಥಿತರಿದ್ದರು.