ಶಿರಸಿ: ನಗರದ ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯಾದ ಐಕ್ಯುಎಸಿ ಸಂಯೋಜಿತ, ಹೊಸ ಮಾರುಕಟ್ಟೆ ಪೋಲಿಸ್ ಠಾಣೆ ಹಾಗೂ ಎನ್ ಸಿ ಸಿ ವಿಭಾಗ ಇವರ ವತಿಯಿಂದ ಅಂತರರಾಷ್ಟ್ರೀಯ ಮಾದಕ ದ್ರವ್ಯ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು .ಈ ಸಂದರ್ಭದಲ್ಲಿ ಪಿ ಎಸ್ ಐ ಭೀಮಾಶಂಕರ್ ಇವರು ಮಾತನಾಡಿ ಡ್ರಗ್ಸ್ ಸೇವನೆಯು ಅತ್ಯಂತ ಅಪಾಯಕಾರಿಯಾಗಿದ್ದು ಇದು ಸಮಾಜದ ಶಾಂತಿ,ಸುವ್ಯವಸ್ಥೆ ಯನ್ನು ಹದಗೆಡಿಸುತ್ತದೆ ಹಾಗೂ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ .ಡ್ರಗ್ಸ್ ಸೇವನೆ ಕಂಡುಬಂದಲ್ಲಿ ಅಥವಾ ಅನುಮಾನ ಬಂದಲ್ಲಿ “ಎನ್ ಡಿ ಪಿ ಎಸ್ ” ಅಡಿಯಲ್ಲಿ ಪ್ರಕರಣ ದಾಖಲಿಸಲಾಗುತ್ತದೆ. ಶಿರಸಿಯಲ್ಲಿ 15 ಜನರನ್ನು ತಪಾಸಣೆಗೆ ಒಳಪಡಿಸಿದಾಗ ಅದರಲ್ಲಿ 12ಜನರು ಡ್ರಗ್ಸ್ ಸೇವಿಸಿದ್ದು ದೃಢಪಟ್ಟಿದೆ ಎಂದರು.
ಪೊಲೀಸ್ ಸಿಬ್ಬಂದಿ ಅಶೋಕ್ ನಾಯಕ್ ಮಾತನಾಡಿ 1985 ರಲ್ಲಿ ಎನ್ ಡಿ ಪಿ ಕಾಯ್ದೆಯನ್ನು ಅಂದಿನ ಪ್ರಧಾನಿ ರಾಜೀವ್ ಗಾಂಧಿ ಜಾರಿಗೆ ತಂದರು .ಇದರ ಮುಖ್ಯ ಉದ್ದೇಶ ಮಾದಕ ವಸ್ತುವನ್ನು ಸಾಗಾಟ,ಮಾರಾಟ ಮತ್ತು ಬೆಳೆಯುದನ್ನು ನಿಷೇಧಿಸಿದೆ. ಶೇಷನ್ ಕೋರ್ಟ್ ನಲ್ಲಿ ಪ್ರಕರಣ ಸಾಬೀತಾದರೆ 10 ಲಕ್ಷ ದಂಡ ಹಾಗೂ 1ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ .ಮಾದಕ ವಸ್ತು ಸೇವನೆ ಕಂಡುಬಂದಲ್ಲಿ ಅಬಕಾರಿ ಇಲಾಖೆ ಅಡಿಯಲ್ಲೂ ಕೂಡ ಪ್ರಕರಣ ದಾಖಲಿಸಬಹುದು ಅದಲ್ಲದೆ ಗಡಿ ಪ್ರದೇಶದಲ್ಲಿ ಇಂಥ ಪ್ರಕರಣ ಕಂಡುಬಂದಲ್ಲಿ ಬಿ ಎಸ್ ಎಫ್ ಮತ್ತು ಆರ್ಮಿ ಕೂಡ ಪ್ರಕರಣ ದಾಖಲಿಸಬಹುದು ಎಂದು ಅವರು ತಿಳಿಸಿದರು.
ಪ್ರಾಚಾರ್ಯ ಡಾ ಟಿ ಎಸ್ ಹಳೆಮನೆ ಸ್ವಾಗತಿಸಿ ಮಾತನಾಡಿ ಇವತ್ತಿನ ಯುವ ಜನಾಂಗ ಗುಟ್ಕಾ,ಡ್ರಗ್ಸ್ ಮುಂತಾದ ಮಾದಕ ದ್ರವ್ಯಗಳಿಗೆ ಮಾರು ಹೋಗುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿಗಳಾದ ಸುನಿಲ್ ಆಚಾರ್ಯ ,ಮಾರುತಿ ನಾಯಕ್ ಹಾಗೂ ಐಕ್ಯುಎಸಿ ಸಂಚಾಲಕ ಡಾ ಎಸ್ ಎಸ್ ಭಟ್ ಉಪಸಿತರಿದ್ದರು.ಪ್ರೊ ರಾಘವೇಂದ್ರ ಜಾಜಿಗುಡ್ಡೆ ಇವರು ವಂದಿಸಿದರು.