ಶಿರಸಿ: ನಾವು ಪದವಿಯನ್ನು ಮಾತ್ರ ಪಡೆದಕೊಂಡು ಉದ್ಯೋಗ ಸೇರಬೇಕು ಎಂಬ ವಿದ್ಯಾರ್ಥಿಗಳ ಇಂದಿನ ಮನಸ್ಸಿನ ಮನೋಭಾವನೆ ಬದಲಾಗಬೇಕಿದೆ ಜೀವನದಲ್ಲಿ ಕಲಿಕೆಯ ಜೊತೆ ಕೌಶಲ್ಯವೂ ಅಷ್ಟೆ ಮುಖ್ಯವೆಂದು ಎಂ ಇ ಎಸ್ ನ ಅಧ್ಯಕ್ಷ ಜಿ. ಎಂ ಹೆಗಡೆ ಮುಳಖಂಡ ಹೇಳಿದರು.
ನಗರದ ಎಂ.ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಐಕ್ಯೂಎಸಿ ಸಂಯೋಜನೆಯಲ್ಲಿ ದೇಶಪಾಂಡೆ ಪೌಂಡೇಶನ್ ಹುಬ್ಬಳ್ಳಿ ಹಾಗೂ ವೃತ್ತಿ ಸ್ಥಾನೀಕರಣ ವಿಭಾಗಗಳ ಸಹಯೋಗದಲ್ಲಿ ಉದ್ಯೋಗ ಕೌಶಲ್ಯ ತರಬೇತಿ ಕಾರ್ಯೆಕ್ರಮದಲ್ಲಿ ಮಾತನಾಡುತ್ತಿದ್ದರು. ಕೇವಲ ಕಲಿಕೆಯಿಂದ ನಾನು ನನ್ನ ಕುಟುಂಬವನ್ನು ಸಲಹಬೇಕೆಂಬುದನ್ನು ಬಿಟ್ಟು ತಮ್ಮಲ್ಲಿ ಉತ್ತಮ ಕೌಶಲ್ಯ ಬೆಳೆಸಿಕೊಂಡು ದೇಶಕ್ಕೆ ಒಳ್ಳೆಯ ಪ್ರಜೆಯಾಗುತ್ತೆನೆ ಎಂಬ ಮನಸ್ಥಿತಿಗೆ ವಿದ್ಯಾರ್ಥಿಗಳು ಬರಬೇಕಿದೆ ಎಂದು ನುಡಿದರು.
1996 ರಲ್ಲಿ ಗುರುರಾಜ್ ದೇಶಪಾಂಡೆ ಅವರು ದೇಶಪಾಂಡೆ ಫೌಂಡೇಶನ್ ಪ್ರಾರಂಭಿಸಿದರು. ಇಂದು ಇದು ಬೃಹತ್ತಾಗಿ ಬೆಳೆದು ಅನೇಕ ವಿದ್ಯಾರ್ಥಿಗಳ ಜೀವನ ರೂಪಿಸುತ್ತಿದೆ ಎಂದು ಹುಬ್ಬಳ್ಳಿಯ ದೇಶಪಾಂಡೆ ಫೌಂಡೇಶನಿನ ಪರಿಚಯವನ್ನು ವಿಭಾಗ ಮುಖ್ಯಸ್ಥರಾದ ಶ್ರೀನಿವಾಸ ನಾಯ್ಕ ಮಾಡಿಕೊಟ್ಟರು.
ಕಳೆದ ವರ್ಷದ ನಮ್ಮ ಕಾಲೇಜಿನ ಹನ್ನೊಂದು ವಿದ್ಯಾರ್ಥಿಗಳು ದೇಶಪಾಂಡೆ ಫೌಂಡೆಶನ್ ನ ಸಹಕಾರದಿಂದ ಇಂದು ಅನೇಕ ಕಂಪನಿಗಳಲ್ಲಿ ಉದ್ಯೋಗ ಪಡೆದುಕೊಂಡಿದ್ದಾರೆ ಹೀಗಾಗಿ ಈಗಿನ ಅಂತಿಮ ವರ್ಷದ ವಿದ್ಯಾರ್ಥಿಗಳು ಈ ಕೌಶಲ್ಯ ತರಬೇತಿಯಿಂದ ಉಪಯೋಗ ಪಡೆದುಕೊಳ್ಳಲಿ ಎಂದು ಕಾರ್ಯಕ್ರಮ ಆಯೋಜಿಸಿದ್ದೆವೆ ಎಂದು ಐಕ್ಯುಎಸಿ ಸಂಚಾಲಕ ಡಾ ಎಸ್. ಎಸ್ ಭಟ್ಟ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಕೌಶಲ್ಯ ತರಬೇತಿಯಂತಹ ಕಾರ್ಯಕ್ರಮದ ಸಂಪೂರ್ಣ ಉಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಲಿ ಎಂದು ಎಂ.ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯರಾದ ಟಿ.ಎಸ್ ಹಳೇಮನೆ ಸ್ವಾಗತ ಭಾಷಣದಲ್ಲಿ ಹೇಳಿದರು. ಪ್ರಾರ್ಥನಾಗೀತೆಯನ್ನು ಸಂಗೀತ ವಿಭಾಗದ ವಿದ್ಯಾರ್ಥಿಗಳು ಹಾಡಿದರು. ವಂದನಾರ್ಪಣೆಯನ್ನು ಪ್ರೋ. ಸತೀಶ್ ನಾಯ್ಕ ನಡೆಸಿದರು.
ಇದೇ ಸಂದರ್ಭದಲ್ಲಿ ಎಂ ಎಂ ಕಾಲೇಜು ಮತ್ತು ದೇಶಪಾಂಡೆ ಫೌಂಡೇಶನ್ ನಡುವಿನ ಒಪ್ಪಂದ ಪತ್ರವನ್ನು ಹಸ್ತಾಂತರಿಸಲಾಯಿತು.
ದೇಶಪಾಂಡೆ ಫೌಂಡೇಶನಿನ ಪರಿಣಾಮ ವಿಭಾಗ ಉತ್ತರಕನ್ನಡ ಮುಖ್ಯಸ್ಥ ಅಫ್ತಾಬ್ ಅತ್ತರ್, ದೇಶಪಾಂಡೆ ಕೌಶಲ್ಯ ವಿಭಾಗ ಹುಬ್ಬಳ್ಳಿಯ ಹಿರಿಯ ಮುಖ್ಯಸ್ಥರಾದ ಸಲ್ಮಾನ್, ಹಿರಿಯ ಅಧಿಕಾರಿ ಹುಬ್ಬಳ್ಳಿಯ ಲಕ್ಷ್ಮಣ ಪಾಟೀಲ್, ವಿಭಾಗ ಮುಖ್ಯಸ್ಥೆ ಧಾರವಾಡದ ರಾಜಶ್ರೀ ನಾಯ್ಕ, ಉತ್ತರಕನ್ನಡ ಜಿಲ್ಲಾ ಮುಖ್ಯಸ್ಥರಾದ ಭಾರತಿ ಎಮ್ ವಿದ್ಯಾರ್ಥಿಗಳು, ಶಿಕ್ಷಕರು, ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.