• Slide
    Slide
    Slide
    previous arrow
    next arrow
  • ಶ್ಯಾಮರಾವ್ ದತ್ತಿನಿಧಿ ಪ್ರಶಸ್ತಿಗೆ ಅಶೋಕ ಹಾಸ್ಯಗಾರ ಆಯ್ಕೆ

    300x250 AD

    ಶಿರಸಿ: ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ನೀಡುವ ಶ್ಯಾಮರಾವ್ ದತ್ತಿನಿಧಿ ಪ್ರಶಸ್ತಿಯನ್ನು ಪ್ರಕಟಿಸಿದೆ. 2022 ನೇ ಸಾಲಿನ ಪ್ರಶಸ್ತಿಗೆ ಹಿರಿಯ ಪತ್ರಕರ್ತ ಅಶೋಕ ಹಾಸ್ಯಗಾರ ಅವರನ್ನು ಆಯ್ಕೆ ಮಾಡಿದೆ.

    ಜುಲೈ 1,2022ರಂದು ಶಿರಸಿಯ ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆಯುವ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಹಿರಿಯ ಪತ್ರಕರ್ತರಾದ ಜಿ.ಯು. ಭಟ್ ಹೊನ್ನಾವರ, ಶಿವಾನಂದ ಕಳವೆ ಶಿರಸಿ, ರಾಜ್ಯ ಸಮಿತಿ ಸದಸ್ಯ ಬಸವರಾಜ ಪಾಟೀಲ ಮುಂಡಗೋಡ ಹಾಗೂ ಸಂಘದ ಅಧ್ಯಕ್ಷ ಜಿ. ಸುಬ್ರಾಯ ಭಟ್ ಬಕ್ಕಳ ಅವರನ್ನು ಆಯ್ಕೆ ಸಮಿತಿ ಒಳಗೊಂಡ ಆಯ್ಕೆ ಸಮಿತಿ ಅಶೋಕ ಹಾಸ್ಯಗಾರ ಅವರನ್ನು ಪ್ರಶಸ್ತಿಗೆ ಆಯ್ಕೆಗೊಳಿಸಿದೆ ಎಂದು ಸಂಘದ ಅಧ್ಯಕ್ಷ ಜಿ.ಸುಬ್ರಾಯ ಭಟ್ ಬಕ್ಕಳ, ಪ್ರಧಾನ ಕಾರ್ಯದರ್ಶಿ ಸುಮಂಗಲಾ ಹೊನ್ನೆಕೊಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಮೂಲತಃ ಸಿದ್ದಾಪುರ ತಾಲೂಕಿನವರಾದ ಅಶೋಕ ಹಾಸ್ಯಗಾರ ಉತ್ತರ ಕನ್ನಡ ಜಿಲ್ಲೆಯ ಹಿರಿಯ ಪತ್ರಕರ್ತರಲ್ಲಿ ಓರ್ವರು. 1983ರಲ್ಲಿ ಕಾರವಾರದಲ್ಲಿ ಲೋಕಧ್ವನಿ ವರದಿಗಾರನಾಗಿ ಪತ್ರಿಕಾ ರಂಗಕ್ಕೆ ಪಾದರ್ಪಣೆ ಮಾಡಿದರು. ನಂತರ ಜನಮಾಧ್ಯಮ, ಹುಬ್ಬಳ್ಳಿಯ ನವನಾಡು, ಬೆಳಗಾವಿಯ ಕನ್ನಡಮ್ಮ ಪತ್ರಿಕೆಯಲ್ಲೂ ಸಹ ವರದಿಗಾರನಾಗಿ ಕೆಲಸ ನಿರ್ವಹಿಸಿದವರು. ಭಾರತೀಯ ಆಕಾಶವಾಣಿ (ಪ್ರಸಾರಭಾರತಿಯಲ್ಲಿ) ಉತ್ತರ ಕನ್ನಡ ಜಿಲ್ಲಾ ವರದಿಗಾರರಾಗಿ ದಶಕಕ್ಕೂ ಹೆಚ್ಚು ಕಾಲ ಕಾರ್ಯನಿರ್ವಹಿಸಿದ್ದಾರೆ. ಕಾರವಾರದ ಕರಾವಳಿ ಮುಂಜಾವು ದಿನಪತ್ರಿಕೆಯ ಸಂಪಾದಕರಾಗಿ 15 ವರ್ಷಗಳ ಸೇವೆಸಲ್ಲಿಸಿದ್ದಾರೆ. ವರದಿಗಾರನಾಗಿ ಪಾದರ್ಪಣೆ ಮಾಡಿದ ಲೋಕಧ್ವನಿ ಪತ್ರಿಕೆ ಸಂಪಾದಕರಾಗಿ 10 ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದಾರೆ. ಶಿರಸಿಯ ಜನಮಾಧ್ಯಮ ಪತ್ರಿಕೆಯ ಸಂಪಾದಕರಾಗಿ 5 ವರ್ಷ ಕಾರ್ಯನಿರ್ವಹಿಸಿದ್ದಾರೆ.

    300x250 AD

    ಅರಣ್ಯ ಅಭಿವೃದ್ಧಿಗೆ ನೀಡಿದ ಅರಿವಿನ ಪ್ರಗತಿ ಪರಿಶೀಲನೆಗೆ ಬಂದ ಇಂಗ್ಲೆಂಡ್ ರಾಯಭಾರಿ ತಂಡಕ್ಕೆ ಫೋಟೋಗ್ರಾಫರ್ ಆಗಿ ಕಾರ್ಯನಿರ್ವಹಿಸಿದ ಹೆಗ್ಗಳಿಕೆ. ಕಾರವಾರದ ಬಿಣಗಾ ಕಾಸ್ಟಿಕ್ ಕಾರ್ಖಾನೆಯಲ್ಲಿ ದಶಕಗಳಿಗೂ ಹೆಚ್ಚು ಕಾಲ ಕೆಲಸ
    ಕೆಲಸ ನಿರ್ವಹಿಸಿದ್ದಾರೆ. ಅಲ್ಲದೇ ಸಾಹಿತ್ಯ ಕ್ಷೇತ್ರದಲ್ಲೂ ತಮ್ಮನ್ನು ತೊಡಗಿಸಿಕೊಂಡಿರುವ ಇವರು ಸಾಕಷ್ಟು ವೈಚಾರಿಕ ಲೇಖನ, ವಿಮರ್ಶೆ, ಸಂಪಾದನೆ ಮಾಡಿದ್ದಾರಲ್ಲದೆ, ತುಡುಗುಣಿ ತಾಳಮದ್ದಲೆ ಪರಂಪರೆ, ಹೂತನ ಚಿರನೂತನ, ಜನಮನದಲ್ಲಿ ಜಯರಾಮ, ಫ್ರೋ ಧರಣೇಂಧ್ರ ಕುರಕುರಿ ಅಭಿನಂದನಾ ಗ್ರಂಥ, ಸುವರ್ಣಸೇತು, ಕರ್ಮಯೋಗಿ ವೈದ್ಯರತ್ನ ಬಾಳುರಾಯರು ಮುಂತಾದ ಕೃತಿಗಳು ಇವರ ಸಂಪಾದನೆಯಲ್ಲಿ ಪ್ರಕಟಗೊಂಡಿವೆ. ಕವಿಯೆಡೆಗೆ ಬಂದ ಕವಿತೆ ಎನ್ನುವ ಕವನ ಸಂಕಲನ ಪ್ರಕಟಿಸಿದ್ದಾರೆ. ಇದಕ್ಕೆ ಮೈಸೂರಿನ ಎಚ್‌ಎಸ್‌ಕೆ ಪ್ರಶಸ್ತಿ ಬಂದಿದೆ. ಸಾಹಿತ್ಯ ಸೇವೆಗಾಗಿ ಶಿರಸಿ ಕಸಾಪ, ಕದಂಬಸೇನೆ ಪ್ರಶಸ್ತಿ, ಪತ್ರಿಕೋದ್ಯಮ ಸೇವೆಗಾಗಿ ಮುಂಬೈನ ಕರ್ಕಿ ವೆಂಕಟರಮಣ ಶಾಸ್ತ್ರಿ ಸೂರಿ ಪ್ರಶಸ್ತಿ, ಕಾರವಾರ ಪತ್ರಕರ್ತರ ಸಂಘದಿಂದ ಠಾಗೂರ್ ಪ್ರಶಸ್ತಿ, ಶಿರಸಿಯ ಕಾರ್ಯನಿರತ ಪತ್ರಕರ್ತರಿಂದ ಸಂಘದ ಪ್ರಶಸ್ತಿ, ಯಲ್ಲಾಪುರ ಶ್ರೀಮಾತಾ ಟ್ರಸ್ಟ್ ನಿಂದ ಪ್ರಶಸ್ತಿ ಪುರಸ್ಕಾರಗಳು ಸಂದಿವೆ

    Share This
    300x250 AD
    300x250 AD
    300x250 AD
    Leaderboard Ad
    Back to top